Ration Card: ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ.! ಕೊನೆಯ ದಿನಾಂಕ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ
Ration Card: ನಮಸ್ಕಾರ ಎಲ್ಲ ಕನ್ನಡದ ಜನತೆಗೆ ಕರ್ನಾಟಕ ರಾಜ್ಯದಲ್ಲಿ ರೇಷನ್ ಕಾರ್ಡ್ ಎಷ್ಟು ಮುಖ್ಯವಂದರೇ ಮನೆಯ ರೇಷನ್ ಹಿಡಿದು ಎಲ್ಲ ಯೋಜನೆಗಳ ಉಪಯೋಗ ಪಡಿಬೇಕಂದರೆ ರೇಷನ್ ಕಾರ್ಡ್ ಬಹಳ ಮುಖ್ಯವಾಗಿದೆ ಅದರಲ್ಲಿಂತು ರೇಷನ್ ಕಾರ್ಡ್ ನಲ್ಲಿ ಕೆಲವಷ್ಟು ತೊಂದರೆಗಳಾಗಿರುತ್ತವೆ ತಿದ್ದುಪಡಿ ಆಗಿರಬಹುದು, ಹೆಸರು ಬದಲಾವಣೆ ಮಾಡಿಸಿಕೊಳ್ಳಲು ರಾಜ್ಯ ಸರ್ಕಾರವು ಅವಕಾಶವನ್ನು ಮಾಡಿಕೊಟ್ಟಿದೆ.
ಏನೆಲ್ಲ ಬದಲಾವಣೆ ಮಾಡಿಸಿಕೊಳ್ಳಬೇಕು ಮತ್ತು ಯಾವೆಲ್ಲ ದಾಖಲಾತಿಗಳು ಬೇಕು? ಎಲ್ಲಿ ತಿದ್ದುಪಡಿ ಮಾಡಿಸಬೇಕು, ಹೊಸ ರೇಷನ್ ಕಾರ್ಡ್ ವಿತರಣೆ ಯಾವಾಗ ಎಂಬುದರ ಎಲ್ಲ ಮಾಹಿತಿ ಈ ಒಂದು ಲೇಖನದ ಕೆಳಭಾಗದಲ್ಲಿ ನೀಡಲಾಗಿರುತ್ತದೆ ಆದ್ದರಿಂದ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ.
ರೇಷನ್ ಕಾರ್ಡ್ ತಿದ್ದುಪಡಿಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಅವಕಾಶವನ್ನು ಮಾಡಿಕೊಟ್ಟಿದೆ, ಅಗಸ್ಟ್ 10 ಕೊನೆಯ ದಿನಾಂಕ ಆಗಿದ್ದು ಅಷ್ಟರೊಳಗಾಗಿ ನಿಮ್ಮ ರೇಷನ್ ಕಾರ್ಡನ್ನು ತಿದ್ದುಪಡಿ ಮಾಡಿಸಬಹುದು, ಈ ಒಂದು ವಿಷಯದ ಕುರಿತು ಮಾಹಿತಿ ನೀಡಿರುವ ಇಲಾಖೆಯು ರೇಷನ್ ಕಾರ್ಡ್ ಹೊಂದಿದವರು ಏನಾದರೂ ತಿದ್ದುಪಡಿ ಮಾಡಿಸಿಕೊಳ್ಳುವ ಸಂಬಂಧ ಆನ್ಲೈನ್ ಮುಖಾಂತರ ಆಗಸ್ಟ್ 10ನೇ ತಾರೀಕಿನ ಒಳಗಾಗಿ ತಿದ್ದಪ್ಪಡಿ ಮಾಡಿಸಬಹುದು.
ಏನೆಲ್ಲ ಬದಲಾವಣೆ ಮಾಡಬಹುದು?
- ಕುಟುಂಬದ ಸದಸ್ಯರ ತಿದ್ದುಪಡಿ.
- ಮನೆಯ ಯಜಮಾನಿ ಬದ್ಲಾವಣೆ.
- ವಿಳಾಸ ತಿದ್ದುಪಡಿ.
- ಹೊಸ ಸದಸ್ಯರ ತಿದ್ದುಪಡಿ.
- ಮೃತಪಟ್ಟವರು ಅಥವಾ ಬೇರೆ ಕುಟುಂಬಕ್ಕೆ ಸೇರಿದವರ ಹೆಸರು ತಿದ್ದುಪಡಿ.
- ಬಯೋಮೆಟ್ರಿಕ್ ಅಥವಾ ಫೋಟೋ ಬದಲಾವಣೆ.
ತಿದ್ದುಪಡಿಗೆ ಏನೆಲ್ಲ ದಾಖಲಾತಿಗಳು ಬೇಕು?
- ಆಧಾರ್ ಕಾರ್ಡ್.
- ಹೊಸ ಹೆಸರು ತಿದ್ದುಪಡಿಗೆ ಅಥವಾ ಸೇರ್ಪಡೆಗೆ ಜಾತಿ ಆದಾಯ ಪ್ರಮಾಣ ಪತ್ರ ಬೇಕು.
- ಮೊಬೈಲ್ ಸಂಖ್ಯೆ ಚಾಲ್ತಿಯಲ್ಲಿರಬೇಕು ಮತ್ತು ಆಧಾರ್ ಕಾರ್ಡ್ ಯ ಲಿಂಕ್ ಆಗಿರಬೇಕು.
- ಹಳಿ ರೇಷನ್ ಕಾರ್ಡ್ ಕಡ್ಡಾಯವಾಗಿ ಬೇಕು.
ರೇಷನ್ ಕಾರ್ಡ್ ಎಲ್ಲಿ ತಿದ್ದುಪಡಿ ಮಾಡಿಸಬಹುದು?
ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳುವವರು ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕವನ್ನು ಕೇಂದ್ರಕ್ಕೆ ಭೇಟಿ ನೀಡಿ, ಆಗಸ್ಟ್ 10 ಒಳಗಾಗಿ ನಿಮ್ಮ ರೇಷನ್ ಕಾರ್ಡ್ ನಲ್ಲಿ ಮೇಲೆ ನೀಡಿರ್ತಕ್ಕಂತ ಬದಲಾವಣೆಯನ್ನು ಮಾಡಿಸಬಹುದು, ಬೆಳಗ್ಗೆ 10 ರಿಂದ ಮತ್ತು ಸಂಜೆ 5 ವರೆಗೆ ಅವಕಾಶ ಇರುತ್ತದೆ. ಕೇವಲ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು ಯಾವುದೇ ಕೈಬರಹ ಸ್ವೀಕರಿಸುವುದಿಲ್ಲ ಎಂದು ಸರ್ಕಾರವು ತಿಳಿಸಿದೆ.
ವಿದ್ಯುತ್ ಬಿಲ್ ದಾಖಲೆ ಕಡ್ಡಾಯ ನೀಡಬೇಕು.!
ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವವರು ಇದೀಗ ವಿದ್ಯುತ್ ಬಿಲ್ ನಲ್ಲಿ ನಮೂದಿಸಿದ ಆರ್ ಆರ್ ನಂಬರ್, ಲೊಕೇಶನ್ ಕೋಡ್ ನೀಡುವುದು ಕಡ್ಡಾಯವಾಗಿದೆ.
ಹೊಸ ರೇಷನ್ ಕಾರ್ಡ್ ಹಂಚಿಕೆ ಯಾವಾಗ?
ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈಗ ರೇಷನ್ ಕಾರ್ಡ್ ತಿದ್ದುಪಡಿಗೆ ಮಾತ್ರ ಅವಕಾಶವನ್ನು ನೀಡಿದೆ. ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವ ಮಾಹಿತಿ ಇನ್ನು ತಿಳಿಸಿಲ್ಲ, ನೀವು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ನೀವು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವ ಮಾಹಿತಿ ಮತ್ತು ರೇಷನ್ ಕಾರ್ಡ್ ಸ್ಥಿತಿ, ಹೊಸ ರೇಷನ್ ಕಾರ್ಡ್ ಹಂಚಿಕೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕೃತ ವೆಬ್ಸೈಟ್ ಲಿಂಕ್: https://ahara.kar.nic.in/Home/EServices