Ration Card E-Kyc: ಆಗಸ್ಟ್ 31ವಳಗೆ ಈ ಕೆಲಸ ಮಾಡದಿದ್ದರೆ.! ನಿಮ್ಮ ರೇಷನ್ ಕಾರ್ಡ್ ಕಡ್ಡಾಯವಾಗಿ ಬಂದ್!
Ration Card E-Kyc Karnataka: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಕರ್ನಾಟಕ ರಾಜ್ಯದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ರೇಷನ್ ಕಾರ್ಡ್ ದಾರರು ಒಂದು ಬಾರಿ ತಮ್ಮ ರೇಷನ್ ಕಾರ್ಡ್ ನಲ್ಲಿರುವ ಎಲ್ಲ ಸದಸ್ಯರ ಈ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ ಎಂದು ಕೇಂದ್ರ ಸರ್ಕಾರವು ಆದೇಶಿಸಿದೆ.
ಆದ್ದರಿಂದ ಕಳೆದ ಹಲವಾರು ವರ್ಷಗಳಿಂದ ತಮ್ಮ ಬಿಪಿಎಲ್ ರೇಷನ್ ಕಾರ್ಡಗೆ ಯಾರು ಈ-ಕೆವೈಸಿ ಮಾಡಿಸಿಲ್ಲ ನೋಡಿ ಅಂತವರು ಅಗಸ್ಟ್ 31ನೇ ತಾರೀಖಿನ ಒಳಗಾಗಿ ಈ-ಕೆವೈಸಿ ಮಾಡಲು ಕೇಂದ್ರ ಸರ್ಕಾರ ಮಾಹಿತಿಯನ್ನು ನೀಡಿದೆ. ಅದೇ ರೀತಿಯಾಗಿ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳುವ ಮುಖಾಂತರ ನೀವು ಈ-ಕೆವೈಸಿ ಮಾಡಿಸಬಹುದಾಗಿದೆ. ಇನ್ನುವರೆಗೂ ಈ-ಕೆವೈಸಿ ಆಗದೆ ಇರುವವರ ಪಟ್ಟಿಯನ್ನು ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಲ್ಲಿ ಪಟ್ಟಿ ಮಾಡಲಾಗಿದೆ. ಸರ್ಕಾರ ನೀಡಿದ ಕೊನೆಯ ದಿನಾಂಕದ ಒಳಗಾಗಿ ಈ-ಕೆವೈಸಿ ಮಾಡಿಸದಿದ್ದರೆ ಅಂತವರ ಬಿಪಿಎಲ್ ರೇಷನ್ ಕಾರ್ಡ್ ನಿಂದ ತೆಗೆದುಹಾಕಲಾಗುತ್ತದೆ. ಎಂದು ಹೇಳಿದ್ದಾರೆ ಈ-ಕೆವೈಸಿ ಮಾಡಿಸುವುದು ಸಂಪೂರ್ಣವಾಗಿ ಉಚಿತವಿದೆ ಎಂದು ಸರಕಾರ ಮಾಹಿತಿ ನೀಡಿದೆ.
ರೇಷನ್ ಕಾರ್ಡ್ ಮೇಲೆ ಸರ್ಕಾರದ ಮಾನದಂಡಗಳು:
ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಹೊಂದಿರುವವರು, ಅನರ್ಹರು ರೇಷನ್ ಕಾರ್ಡ್ ಪಡೆದುಕೊಂಡಿದ್ದು, ಆರ್ಥಿಕವಾಗಿ ಬಡತನದಲ್ಲಿರುವವರು, ಸುಳ್ಳು ದಾಖಲಾತಿಗಳನ್ನು ನೀಡಿ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡವರು ಕೂಡಲೆ ತಮ್ಮ ಹತ್ತಿರದ ಕಚೇರಿ ಅಥವಾ ಆಹಾರ ನಿರೀಕ್ಷಿಕರನ್ನು ಭೇಟಿ ನೀಡುವ ಮೂಲಕ ರೇಷನ್ ಕಾರ್ಡನ್ನು ಹಿಂದಿರುಗಿಸಬೇಕೆಂದು ಮಾಹಿತಿಯನ್ನು ನೀಡಿದ್ದಾರೆ.
ರೇಷನ್ ಕಾರ್ಡ್ ಈ-ಕೆವೈಸಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ:
- ನಿಮ್ಮ ರೇಷನ್ ಕಾರ್ಡ್ ಈ-ಕೆವೈಸಿ ಸ್ಟೇಟಸ್ ಚೆಕ್ ಮಾಡಲು ಇಲ್ಲಿ ನೀಡಿರುವ https://ahara.kar.nic.in/Home/EServices ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ ಗೆ ತೆರಳುವಿರಿ.
- ನಂತರ ಹಂತದಲ್ಲಿ ಎಡಭಾಗದಲ್ಲಿ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ, ಆನಂತರ ಈಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
- ಮುಂದಿನ ಹಂತದಲ್ಲಿ ಡಿಬಿಟಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ, ಅಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ, ಮತ್ತು ರೇಷನ್ ಕಾರ್ಡ್ ವಿವರ ಮೇಲೆ ಆಯ್ಕೆ ಮಾಡಿಕೊಳ್ಳಿ, ನಂತರ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ Go ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ನಂತರ ಪುಟದಲ್ಲಿ ನಿಮ್ಮ ರೇಷನ್ ಕಾರ್ಡ್ ನಲ್ಲಿ ಎಷ್ಟು ಜನರಿದ್ದಾರೆ ಮತ್ತು ಈ-ಕೆವೈಸಿ ಆಗಿದೆ ಅಥವಾ ಇಲ್ಲ ಎಂದು ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ ಅದಲ್ಲದೆ ಇಲ್ಲಿಯವರೆಗೆ ನೀವು ಎಷ್ಟು ಅಕ್ಕಿಯನ್ನು ಪಡೆದಿರುವ ಮಾಹಿತಿ ಸಹ ಬರುತ್ತದೆ.
ನಿಮ್ಮ ರೇಷನ್ ಕಾರ್ಡ್ ಈ-ಕೆವೈಸಿ ಆಗಿಲ್ಲ ಅಂದರೆ ಆಗಸ್ಟ್ 31ರ ತಾರೀಖಿನ ಒಳಗಾಗಿ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳುವ ಮುಖಾಂತರ ಈ-ಕೆವೈಸಿ ಮಾಡಿಸಿ.