Anganwadi Recruitment: ಅಂಗನವಾಡಿ ಟೀಚರ್ 734 ಹುದ್ದೆಗಳಿಗೆ ನೇಮಕಾತಿ.! ಕೂಡಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ!

Jobs

Anganwadi Recruitment: ಅಂಗನವಾಡಿ ಟೀಚರ್ 734 ಹುದ್ದೆಗಳಿಗೆ ನೇಮಕಾತಿ.! ಕೂಡಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ!

WCD Anganwadi Recruitment 2024: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಕರ್ನಾಟಕ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿಯಲ್ಲಿ ಖಾಲಿ ಇರುವ ಸಹಾಯಕಿ ಮತ್ತು ಕಾರ್ಯಕರ್ತೆಯರ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದ್ದು. ಹುದ್ದೆಗಳಿಗೆ ನೇಮಕಾತಿ ಸಂಬಂಧಪಟ್ಟಂತೆ ಹುದ್ದೆಗಳಿಗೆ ಆಯ್ಕೆ ವಿಧಾನ, ಸಂಬಳ, ಶೈಕ್ಷಣಿಕ ಅರ್ಹತೆ, ಉದ್ಯೋಗ ಸ್ಥಳ, ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು ಇನ್ನಿತರ ಮಾಹಿತಿಯನ್ನು ಈ ಒಂದು ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ, ಆದ್ದರಿಂದ ಸಂಪೂರ್ಣವಾಗಿ ಓದಿ ನಂತರದಲ್ಲಿ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ.

ಹುದ್ದೆಗಳ ಹೆಸರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ.

ಹುದ್ದೆಗಳ ಸಂಖ್ಯೆ: 734 ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ.

ಹುದ್ದೆಗಳ ವಿವರ:

  • ಅಂಗನವಾಡಿ ಕಾರ್ಯಕರ್ತರು: 168
  • ಅಂಗನವಾಡಿ ಸಹಾಯಕಿಯರು: 566

ಕಾರ್ಯನಿರ್ವಹಿಸುವ ಸ್ಥಳ:

  • ಹಾಸನ ಜಿಲ್ಲೆಯಲ್ಲಿ
  • ಚನ್ನರಾಯಪಟ್ಟಣ
  • ಹೊಳೆನರಸೀಪುರ
  • ಬೇಲೂರು
  • ಸಕಲೇಶಪುರ
  • ಆಲೂರು
  • ಅರಸೀಕೆರೆ
  • ಅರಕಲಗೂಡು

ಈ ಮೇಲೆ ನೀಡಿರುವ ತಾಲೂಕಿನಲ್ಲಿ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ.

ಶೈಕ್ಷಣಿಕ ಅರ್ಹತೆ:

  • ಅಂಗನವಾಡಿ ಕಾರ್ಯಕರ್ತರು: 12ನೇ ತರಗತಿ ಕನ್ನಡ ಭಾಷೆಯಲ್ಲಿ ಪಾಸ್ ಆಗಿರಬೇಕು.
  • ಅಂಗನವಾಡಿ ಸಹಾಯಕಿಯರು: ಹತ್ತನೇ ತರಗತಿ ಕನ್ನಡ ಭಾಷೆಯಲ್ಲಿ ಪಾಸ್ ಆಗಿರಬೇಕು.

ವಯಸ್ಸಿನ ಮಿತಿ: ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮಹಿಳೆಯರಿಗೆ ಕನಿಷ್ಠ 19 ವರ್ಷ ಗರಿಷ್ಠ 35 ವರ್ಷವನ್ನು ಮೀರಬಾರದು.

ವಯಸ್ಸಿನ ಸಡಿಲಿಕೆ: ವಿಕಲಚೇತನರಿಗೆ ಹತ್ತು ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ, ಎಲ್ಲ ಮಾಹಿತಿಯಲ್ಲಿ ಸಮನಾಗಿದ್ದರೆ ಅಂಕಪಟ್ಟಿಯಲ್ಲಿ ಹೆಚ್ಚು ಅಂಕ ಪಡೆದವರನ್ನು ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

  • ಜನನ ಪ್ರಮಾಣ ಪತ್ರ/ಎಸ್ ಎಸ್ ಎಲ್ ಸಿ ಅಂಕಪಟ್ಟಿ ಅಲ್ಲಿರುವ ದಿನಾಂಕ ಬೇಕಾಗುತ್ತದೆ.
  • ನಿಗದಿತ ವಿದ್ಯಾರ್ಹತೆ ಅಂಕಪಟ್ಟಿ
  • ತತಹಶೀಲ್ದಾರರು ಮತ್ತು ಉಪ ತಹಸಿಲ್ದಾರ್ ರಿಂದ ಮೂರು ವರ್ಷದ ವಾಸ್ತು ಸ್ಥಳ ಪ್ರಮಾಣ ಪತ್ರ.
  • ಅಭ್ಯರ್ಥಿಗಳ ಜಾತಿ ಪ್ರಮಾಣ ಪತ್ರ.
  • ವಿಧವಾ ಪ್ರಮಾಣ ಪತ್ರ ಮತ್ತು ಪತಿಯ ಮರಣ ಪ್ರಮಾಣ ಪತ್ರ (ಮರಣ ಹೊಂದಿದಲ್ಲಿ ಮಾತ್ರ)
  • ಅಂಗವಿಕಲ ಪ್ರಮಾಣ ಪತ್ರ (ಅಂಗವಿಕಲ ಇದ್ದಲ್ಲಿ ಮಾತ್ರ)

ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ: ಪ್ರಾರಂಭವಾಗಿದೆ.
  • ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 04-09-2024

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್: https://karnemakaone.kar.nic.in/abcd/ApplicationForm_JA_org.aspx

Leave a Reply

Your email address will not be published. Required fields are marked *