Traffic New Rules: ಬೈಕ್, ಸ್ಕೂಟರ್ ಸವಾರರಿಗೆ ಹೊಸ ರೂಲ್ಸ್.! ಸೆಪ್ಟೆಂಬರ್ 1ರಿಂದ ರಾಜ್ಯಾದ್ಯಂತ ಜಾರಿ!
Traffic New Rules: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ನೀವು ಬೈಕ್ ಅಥವಾ ಸ್ಕೂಟರ್ ಸವಾರರಾಗಿದ್ದಲ್ಲಿ ಇಂಥವರಿಗಾಗಿ ಹೊಸ ಸಂಚಾರಿ ನಿಯಮ ಸೆಪ್ಟೆಂಬರ್ 1ರಿಂದ ಜಾರಿಗೆ ಬರಲಿದೆ. ಮೋಟಾರವಹನ ಕಾಯ್ದೆ ಅಡಿಯಲ್ಲಿ ಸಂಚಾರರು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ, ದೇಶದ ಹೆಚ್ಚಿನ ಭಾಗಗಳಲ್ಲಿ ಈ ಒಂದು ನಿಯಮವನ್ನು ಅನುಸರಿಸುತ್ತಿಲ್ಲ, ಹಿಂಬದಿಯ ಸವಾರರು ಬಿಡಿ, ದ್ವಿಚಕ್ರದ ವಾಹನ ಸವಾರರು ಹೆಲ್ಮೆಟ್ ಇಲ್ಲದೆ ಹಾಗೆ ಓಡಾಡುತ್ತಿದ್ದಾರೆ. ವಾಸ್ತವವಾಗಿ ಈ ಒಂದು ನಿಯಮವನ್ನು ಕರ್ನಾಟಕದಲ್ಲಿ ಜಾರಿಗೆ ತರಲು ಹೊರಟಿದ್ದಾರೆ, ಈ ಒಂದು ಹೊಸ ನಿಯಮದ ಪ್ರಕಾರ ದ್ವಿಚಕ್ರ ವಾಹನ ಚಲಾಯಿಸುವ ವ್ಯಕ್ತಿಯು ಮತ್ತು ಪಿಲಿಯನ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಒಂದು ನಿಯಮವನ್ನು ಅನುಸರಿಸದಿದ್ದರೆ ಎಷ್ಟು ದಂಡ ಬೀಳುತ್ತದೆ ಮತ್ತು ಯಾಕೆ ಹೆಲ್ಮೆಟ್ ಧರಿಸಬೇಕು ಎಂಬುದರ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ ಆದ್ದರಿಂದ ಸಂಪೂರ್ಣವಾಗಿ ಓದಿ.
ಸೆಪ್ಟೆಂಬರ್ 1ರಿಂದ ಹೊಸ ನಿಯಮ ಜಾರಿ:
ಹೈಕೋರ್ಟ್ ನ ಆದೇಶದ ನಂತರ ಕರ್ನಾಟಕದಲ್ಲಿ ಸೆಪ್ಟೆಂಬರ್ 1 ರಿಂದ ಪಿಲಿಯನ್ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು, ರಸ್ತೆಗಳಲ್ಲಿ ಸಾಕಷ್ಟು ಅಪಘಾತಗಳು ಹೆಚ್ಚಿಸುತ್ತಿರುವುದರಿಂದ ಸಾರಿಗೆ ಸಂಚಾರ ಇಲಾಖೆಯು ಈ ಒಂದು ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ಒಂದು ಹಿನ್ನೆಲೆಯಿಂದಾಗಿ ಈ ಒಂದು ಕ್ರಮವನ್ನು ಕೈಗೊಳ್ಳಲಾಗಿದೆ, ಕರ್ನಾಟಕ ಪೊಲೀಸ್ ಕಮಿಷನರ್ ಮತ್ತು ಜಿಲ್ಲಾಧಿಕಾರಿಗಳು, ಜಿಲ್ಲಾ ರಸ್ತೆ ಸುರಕ್ಷಿತ ಸಮಿತಿ ಅಧ್ಯಕ್ಷರು ಸಭೆ ಕೂಡಿ ಈ ಒಂದು ನಿಯಮಗಳನ್ನು ಜಾರಿಗೆ ತಂದಿದ್ದಾರೆ ನೀವು ಏನಾದರೂ ನಿಯಮಗಳನ್ನು ಪಾಲಿಸದಿದ್ದರೆ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕ ಪೊಲೀಸ್ ಅವರ ಪ್ರಕಾರ ಈ ನಿಯಮಗಳನ್ನು ಯಾರು ಅನುಸರಿಸದಿದ್ದರೆ, ರೂ.1035 ದಂಡವನ್ನು ನೀಡಬೇಕಾಗುತ್ತದೆ. ಅಷ್ಟೇ ಅಲ್ಲದೆ ನೀವು ನಿಯಮಗಳನ್ನು ಉಲ್ಲಂಘಿಸಿದಲ್ಲಿ ನಿಮ್ಮ ಲೈಸೆನ್ಸ್ ಅನ್ನು ಮೂರು ತಿಂಗಳವರೆಗೆ ಅಮಾನತುಗೊಳಿಸಲಾಗುತ್ತದೆ, ಹೆಲ್ಮೆಟ್ ಗುಣಮಟ್ಟದ ಬಗ್ಗೆ ಸಹ ಸೂಚಿಸಲಾಗಿದೆ, ಕಳಪೆ ಗುಣಮಟ್ಟದ ಹೆಲ್ಮೆಟ್ ಗಳನ್ನು ಧರಿಸಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಸ್ತೆ ಸಂಚಾರ ಇಲಾಖೆ ಮಾಹಿತಿಯನ್ನು ನೀಡಿದ್ದಾರೆ.
ವಾಹನ ಸಂಚಾರರು ಹೆಲ್ಮೆಟ್ ಏಕೆ ಬಳಸಬೇಕು:
ನೀವು ಹೆಲ್ಮೆಟ್ ಧರಿಸುವುದರಿಂದ ದಂಡವನ್ನು ತಪ್ಪಿಸಲು ಮಾತ್ರ ಅಲ್ಲವೇ ನಿಮ್ಮ ಸುರಕ್ಷತೆ ಹಿಂದೆ ಇರುವ ವ್ಯಕ್ತಿಯು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಏಕೆಂದರೆ ಅಪಘಾತ ಸಂಭವಿಸಿದಾಗ ತೆಲೆಗೆ ತೀವ್ರವಾದ ಗಾಯವಾಗುತ್ತದೆ, ಈ ಒಂದು ಸಂದರ್ಭದಲ್ಲಿ ಅನೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.