Swavalambi Sarathi Scheme: ಆಟೋರಿಕ್ಷಾ ವಾಹನ ಖರೀದಿಸಲು ಶೇ.50 ರಷ್ಟು ಸಹಾಯಧನ.! ಬೇಗನೆ ಅರ್ಜಿ ಸಲ್ಲಿಸಿ 3 ಲಕ್ಷ ಪಡೆಯಿರಿ!

Schemes

Swavalambi Sarathi Scheme: ಆಟೋರಿಕ್ಷಾ ವಾಹನ ಖರೀದಿಸಲು ಶೇ.50 ರಷ್ಟು ಸಹಾಯಧನ.! ಬೇಗನೆ ಅರ್ಜಿ ಸಲ್ಲಿಸಿ 3 ಲಕ್ಷ ಪಡೆಯಿರಿ!

Swavalambi Sarathi Scheme: ನಮಸ್ಕಾರ ಎಲ್ಲಾ ಕನ್ನಡ ಜನತೆ, ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ವಾಹನ ಖರೀದಿಸು ಅವರಿಗೆ ಭರ್ಜರಿ ಗುಡ್ ನ್ಯೂಸ್ ಅಂತಾನೆ ಹೇಳಬಹುದು, ಏನು ಅಂದ್ರೆ ವಾಹನ ಖರೀದಿಸಲು ನಿಮ್ಮ ಹತ್ತಿರ ಹಣ ಇರಲ್ಲ ಆದ್ದರಿಂದ ನೀವು ಬ್ಯಾಂಕಿಗೆ ಸಾಲ ಕೇಳಲು ಹೋದಾಗ ಬಹಳಷ್ಟು ದಾಖಲೆಗಳನ್ನು ಕೇಳಿ ಸಮಯವನ್ನು ವ್ಯರ್ಥ ಮಾಡುತ್ತಾರೆ. ಆದ್ದರಿಂದ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ನೀವು ವಾಹನ ಖರೀದಿಸಲು 50% ರಷ್ಟು ಸಹಾಯಧನವನ್ನು ಪಡೆಯಬಹುದು ಅಂದರೆ 3 ಲಕ್ಷದವರೆಗೆ ಹಣವನ್ನು ಸಹಾಯಧನವಾಗಿ ಪಡೆಯಬಹುದು, ಯೋಜನೆಗೆ ಯಾವ ರೀತಿಯ ಅರ್ಜಿ ಸಲ್ಲಿಸುವುದು ಮತ್ತು ಯಾವ ದಾಖಲೆಗಳು ಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನೀಡಲಾಗಿದೆ ಆದ್ದರಿಂದ ಸಂಪೂರ್ಣವಾಗಿ ಓದಿ.

ಸ್ವಾವಲಂಬಿ ಸಾರಥಿ ಯೋಜನೆ ಮಾರ್ಗ ಸೂಚಿಗಳು!

  • ಈ ಯೋಜನೆಯನ್ನು ರಾಷ್ಟ್ರೀಕೃತ ಅಥವಾ ಷೆಡ್ಯೂಲ್ಸ್ ಬ್ಯಾಂಕುಗಳಿಂದ ಅನುಷ್ಠಾನವನ್ನು ಗೊಳಿಸಲಾಗಿದೆ.
  • ಬ್ಯಾಂಕ್ ಗಳಿಂದ ಸಾಲ ಪಡೆದು ಆಟೋರಿಕ್ಷಾ, ಗೂಡ್ಸ್ ವಾಹನ ಸಾಲಗಳಿಗೆ ಶೇ. 50ರಷ್ಟು ಸಹಾಯಧನ ಮಾಡುತ್ತದೆ, ಅಂದರೆ 3 ಲಕ್ಷದವರೆಗೆ ಸಹಾಯ ನೀಡುತ್ತದೆ.
  • ಮಹಿಳೆಯರಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ.
  • ಈ ಯೋಜನೆ ಅಡಿಯಲ್ಲಿ ವಾಹನವನ್ನು ಖರೀದಿಸುವ ವ್ಯಕ್ತಿಯು ಸಾಲದ ಅವಧಿ ಒಳಗೆ ಇನ್ನೊಬ್ಬರಿಗೆ ವಾಹನವನ್ನು ಕೊಡಬಾರದು.
  • ಈ ಒಂದು ವಾಹನದಿಂದ ವಾರ್ಷಿಕ ದುಡಿಮೆ ಮತ್ತು ಖರೀದಿ ಮಾಡಿದ ನಂತರ ಸಾಲದ ರಸೀದಿ ಮತ್ತು ಇನ್ನಿತರ ಮಾಹಿತಿಯನ್ನು ಜಿಲ್ಲಾ ಕಚೇರಿಗೆ ನೀಡಬೇಕು.
  • ಯಾವುದಾದರೂ ವಿಮೆಯನ್ನು ತೆಗೆದುಕೊಂಡ ನಂತರ ಖರೀದಿಸಿರುವ ಮಾಹಿತಿಯನ್ನು ನಿಗಮನಕ್ಕೆ ತರಬೇಕು.
  • ನಿಗಮದ ಸಾಲದ ಮೇಲೆ ವಾಹನ ಪಡೆದ ನಂತರ ಕೆ ಎಂ ಡಿ ಸಿ ವತಿಯಿಂದ ಸಹಾಯಧನ ಎಂದು ನಮ್ಮೂಧಿಸಬೇಕು.
  • ನಿಗಮದಿಂದ ಪಡೆದ ವಾಹನದ ಜೊತೆಗೆ ಅರ್ಜಿದಾರರ ಭಾವಚಿತ್ರ ಜಿಲ್ಲಾ ವ್ಯವಸ್ಥಾಪಕರು ದೃಢೀಕರಿಸಿದ ಪತ್ರದಲ್ಲಿ ಇಡಬೇಕು.
  • ನನಗರ ಪ್ರದೇಶದಲ್ಲಿ ಪ್ಯಾಸೆಂಜರ್ ಆಟೋಗಳಿಗೆ ಪರ್ಮಿಂಟ್ ಕಡ್ಡಾಯವಾಗಿ ಇರುತ್ತದೆ.

ಸ್ವಾವಲಂಬಿ ಸಾರಥಿ ಯೋಜನೆ ಅರ್ಹತೆಗಳು?

  • ರಾಜ್ಯದ ಮತೀಯ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಆಗಿರಬೇಕು.
  • ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು.
  • ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ ಗರಿಷ್ಠ 55 ವರ್ಷ ಮಿರಬಾರದು.
  • ಕುಟುಂಬದ ವಾರ್ಷಿಕ ಆದಾಯವು 6 ಲಕ್ಷದ ಒಳಗಡೆ ಇರಬೇಕು.
  • ಅರ್ಜಿದಾರರ ಕುಟುಂಬದಲ್ಲಿ ಯಾವುದೇ ಸರಕಾರಿ ಹುದ್ದೆಗಳಲ್ಲಿ ತೊಡಗಿರಬಾರದು.
  • ಅರ್ಜಿದಾರರು ಆರ್ ಟಿ ಓ ಸಂಬಂಧಪಟ್ಟ ವಾಹನ ಚಲಾವಣೆ ಪತ್ರವನ್ನು ಹೊಂದಿರಬೇಕು.
  • ಅರ್ಜಿದಾರರ ಕುಟುಂಬ ರಾಜ್ಯ ಸರ್ಕಾರದ ಯಾವುದೇ ಸಾಲದ ಯೋಜನೆಯಲ್ಲಿ ಸಾಲವನ್ನು ಪಡೆಯಬಾರದು.
  • ಅರ್ಜಿದಾರರು ಕೆಎಂಡಿಸಿಯಲ್ಲಿ ಸುಸ್ತಿದಾರರಾಗಿರಬಾರದು.

ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?

  • ಆನ್ಲೈನ್ ಅರ್ಜಿ ಫಾರಂ
  • ಅರ್ಜಿದಾರರ ಎರಡು ಫೋಟೋ
  • ಆಧಾರ್ ಕಾರ್ಡ್
  • ಜಾತಿ ಆದಾಯ ಪ್ರಮಾಣ ಪತ್ರ
  • ಅರ್ಜಿದಾರರ ಡ್ರೈವಿಂಗ್ ಲೈಸೆನ್ಸ್
  • ಅರ್ಜಿದಾರರು ಯಾವುದೇ ಸಾಲದ ಯೋಜನೆಯಲ್ಲಿ ಸಾಲವನ್ನು ಪಡೆದಿರುವ ಬಾರದು ಎಂಬ ಜಿಲ್ಲಾ ವ್ಯವಸ್ಥಾಪಕರಿಂದ ದೃಢೀಕರಣ ಪ್ರಮಾಣ ಪತ್ರ.
  • ಈ ಯೋಜನೆ ಅಡಿ ಪಡೆದಿರುವ ವಾಹನವನ್ನು ಯಾರಿಗೂ ಕೊಡಬಾರದು ಎಂಬ ದೃಢೀಕರಣ ಪ್ರಮಾಣ ಪತ್ರ.

ಈ ಯೋಜನೆಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು?

ನಿಮ್ಮ ಹತ್ತಿರದ ಸೇವಾ ಸಿಂಧು ಕೇಂದ್ರ ಮತ್ತು ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್, ಸಿ ಎಸ್ ಸಿ ಕೇಂದ್ರ ದಲ್ಲಿ ನೀವು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಈ ಯೋಜನೆಗೆ ಅರ್ಜಿ ಸಲ್ಲಿಸುವ ಕೋನೆಯ ದಿನಾಂಕ?

ಈ ಒಂದು ಯೋಜನೆಗೆ ನೀವು ಆಗಸ್ಟ್ 31ನೇ ತಾರೀಖಿನ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಈ ಒಂದು ಯೋಜನೆಯಿಂದಾಗಿ ಹೊಸದಾಗಿ ವಾಹನಗಳನ್ನು ಖರೀದಿಸಿಕೊಳ್ಳುವರಿಗೆ ತುಂಬಾನೇ ಸಹಾಯಕರಾಗುತ್ತದೆ. ಮತ್ತು ಇದೇತರನಾದ ಮಾಹಿತಿಗಳಿಗಾಗಿ ನಮ್ಮ ಜಾಲತಾಣವನ್ನು ಅನುಸರಿಸಿ.

Leave a Reply

Your email address will not be published. Required fields are marked *