Ration Card Update: 20 ಲಕ್ಷ ಜನರ ರೇಶನ್ ಕಾರ್ಡ್ ರದ್ದು.! ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಬಂದ್!
Suspended Ration Card List: ನಮಸ್ಕಾರ ಕರ್ನಾಟಕದ ಎಲ್ಲ ಸಮಸ್ತ ಜನತೆಗೆ, ಹಿಂದಿನ ತಿಂಗಳು 8 ನೇ ತಾರೀಖಿನಂದು ವಿಧಾನಸೌಧದಲ್ಲಿ ರಾಜ್ಯದ ಜಿಲ್ಲಾ ಅಧಿಕಾರಿಗಳು, ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯದರ್ಶಿ ಅಭ್ಯರ್ಥಿಗಳ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯನವರು ಅನರ್ಹ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದುಗೊಳಿಸುವಂತೆ ಕಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ಇದರ ಸಂಪೂರ್ಣ ವಿವರವನ್ನು ಕೆಳಗಡೆ ನೀಡಲಾಗಿದೆ, ಆದ್ದರಿಂದ ಸಂಪೂರ್ಣವಾಗಿ ಓದಿ.
ಕರ್ನಾಟಕ ರಾಜ್ಯದಲ್ಲಿ ಶೇಕಡಾ 80ರಷ್ಟು BPL ಕಾರ್ಡ್ಗಳನ್ನು ಹೊಂದಿದ್ದು, 4.37 ಕೋಟಿ ಜನರು ಬಿಪಿಎಲ್ ರೇಷನ್ ಕಾರ್ಡ್ ಸೌಲಭ್ಯವನ್ನು ಪಡೆಯುತ್ತಿದ್ದಾರೆ. 2.95 ಲಕ್ಷ ಹೊಸ ರೇಷನ್ ಕಾರ್ಡ್ ಗಳು ಅರ್ಜಿ ಸಲ್ಲಿಕೆ ಆಗಿದೆ, ಹೊಸ ರೇಷನ್ ಕಾರ್ಡ್ ಹಂಚಿಕೆ ಬಾಕಿ ಇದ್ದು ಅನರ್ಹ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದುಗೊಳಿಸಿ ಹೊಸ ರೇಷನ್ ಕಾರ್ಡ್ ಗಳನ್ನು ಉಪಯೋಗ ಪಡೆಯುವ ಜನರಿಗೆ ನೀಡಲಾಗುವುದು ಎಂದು ಮಾಹಿತಿಯನ್ನು ನೀಡಿದ್ದಾರೆ.
ಹೌದು, ಇದರ ಬೆನ್ನಲ್ಲೇ ಕಾರ್ಯ ಪ್ರವೃತ್ತಿರಾದ ಹಿಂದಿನ ಆರು ತಿಂಗಳು ಒಮ್ಮೆ ಅನರ್ಹ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪತ್ತೆ ಹಚ್ಚಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಮಾಹಿತಿಯನ್ನು ನೀಡಿದ್ದು. ಆಹಾರ ಇಲಾಖೆಯು 20 ಲಕ್ಷಕ್ಕೂ ಹೆಚ್ಚು BPL ರೇಷನ್ ಕಾರ್ಡ್ ಗಳನ್ನು ರದ್ದು ಮಾಡಿದ್ದು ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಎಂದು ಚೆಕ್ ಮಾಡಿಕೊಳ್ಳಲು ಕೆಳಗೆ ನೀಡಿರುವ ಹಂತಗಳನ್ನು ಪಾಲನೆ ಮಾಡಿ.
ರದ್ದಾದ ರೇಷನ್ ಕಾರ್ಡ್ ಪಟ್ಟಿ ಚೆಕ್ ಮಾಡುವುದು ಹೇಗೆ?
- ಮೊದಲು ಕೆಳಗಡೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ: https://ahara.kar.nic.in/Home/EServices
- ಮುಂದಿನ ಹಂತದಲ್ಲಿ ಈ ರೇಷನ್ ಕಾರ್ಡ್ ಮೇಲೆ ಕ್ಲಿಕ್ ಮಾಡಿ, ನಂತರದಲ್ಲಿ ಶೋ ಕ್ಯಾನ್ಸಲ್ಡ್/ಸಸ್ಪೆಂಡೆಡ್ ರೇಷನ್ ಕಾರ್ಡ್ ಮೇಲೆ ಕ್ಲಿಕ್ ಮಾಡಿ.
- ನಂತರದಲ್ಲಿ ನಿಮ್ಮ ಜಿಲ್ಲೆ ಮತ್ತು ತಾಲೂಕು, ತಿಂಗಳು, ವರ್ಷ ಆಯ್ಕೆ ಮಾಡಿಕೊಳ್ಳಿ ಮತ್ತೆ ಗೋ ಕ್ಲಿಕ್ ಮಾಡಿ.
- ನಂತರದಲ್ಲಿ ನಿಮಗೆ ಒಂದು ಪಟ್ಟಿ ದೊರೆಯುತ್ತದೆ ಅದರಲ್ಲಿ ರೇಷನ್ ಕಾರ್ಡ್ ಗಳು ರದ್ದಾದ ಲಿಸ್ಟನ್ನು ಸಂಪೂರ್ಣವಾಗಿ ನೀಡಿರುತ್ತಾರೆ.