Ration Card Update: ರೇಷನ್ ಕಾರ್ಡ್ ಹೊಂದಿದವರಿಗೆ ಕಹಿ ಸುದ್ದಿ.! ಇನ್ಮುಂದೆ ಪ್ರತಿ ತಿಂಗಳು ರೇಷನ್ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ!
Ration Card Update: ನಮಸ್ಕಾರ ಎಲ್ಲಾ ಕನ್ನಡ ಸಮಸ್ತ ಜನತೆಗೆ, ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಇಂದ ಅಥವಾ ಗ್ರಾಹಕರ ವ್ಯವಹಾರ ಇಲಾಖೆಯಿಂದ ರೇಷನ್ ಕಾರ್ಡ್ ಪಡೆದುಕೊಂಡಿರುವ ಗ್ರಾಹಕರು ಮತ್ತು ಈ ಒಂದು ರೇಷನ್ ಕಾರ್ಡ್ ನಿಂದ ರಾಜ್ಯದಲ್ಲಿರಬಹುದು, ಕೇಂದ್ರದಲ್ಲಿ ಹಲವಾರು ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಲು ಈ ಒಂದು ರೇಷನ್ ಕಾರ್ಡ್ ಮುಖ್ಯವಾಗಿ ಬೇಕು.
ಪ್ರತಿ ತಿಂಗಳ ಮನೆ ರೇಷನ್ ಪಡೆಯಲು ಈ ಒಂದು ಚೀಟಿ ಬೇಕು ಇನ್ನು ಮುಂದೆ ಮನೆಯ ರೇಷನ್ ಪಡೆಯಲು ಈ ಒಂದು ಕೆಲಸವನ್ನು ಕಡ್ಡಾಯವಾಗಿ ಮಾಡಬೇಕು. ಇಲ್ಲ ಅಂದರೆ ನಿಮಗೆ ಇನ್ನು ಮುಂದೆ ಪ್ರತಿ ತಿಂಗಳು ಉಚಿತವಾಗಿ ರೇಷನ್ ಸಿಗುವುದಿಲ್ಲ. ಎಂದು ರಾಜ್ಯ ಸರ್ಕಾರವು ಮಾಹಿತಿಯನ್ನು ನೀಡಿದೆ ಆ ಒಂದು ಕೆಲಸ ಯಾವುದೇ ಎಂಬುದನ್ನು ಈ ಒಂದು ಲೇಖನದ ಕೆಳಭಾಗದಲ್ಲಿ ಸಂಪೂರ್ಣವಾಗಿ ನೀಡಲಾಗಿದೆ, ಆದ್ದರಿಂದ ಸಂಪೂರ್ಣವಾಗಿ ಒಂದು ಲೇಖನವನ್ನು ಓದಿ.
ಕರ್ನಾಟಕ ರಾಜ್ಯ ಸರ್ಕಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಥವಾ ಗ್ರಾಹಕರ ವ್ಯವಹಾರ ಇಲಾಖೆಯಿಂದ ಆರ್ಥಿಕವಾಗಿ ಹಿಂದೆ ಉಳಿದ ಬಡ ಕುಟುಂಬಗಳಿಗೆ ದಿನನಿತ್ಯ ಬಳಕೆಯ ಆಹಾರ ಮತ್ತು ಧಾನ್ಯಗಳ ಒದಗಿಸಲು ಮತ್ತು ಹಲವಾರು ಯೋಜನೆಗಳ ಸೌಲಭ್ಯ ಪಡೆಯಲು ಈ ಒಂದು ರೇಷನ್ ಕಾರ್ಡನ್ನು ನೀಡಲಾಗಿದೆ. ಈ ರೇಷನ್ ಕಾರ್ಡ್ಗಳನ್ನು ಹೊಂದಿದ ರಾಜ್ಯದ ಎಲ್ಲ ಫಲಾನುಭವಿಗಳು ಈ ಕೆವೈಸಿ ಕಡ್ಡಾಯವಾಗಿ ಮಾಡಿಸಬೇಕೆಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಮಾಹಿತಿಯನ್ನು ಹೊರಡಿಸಲಾಗಿದೆ.
ಕೆಲವಷ್ಟು ರೇಷನ್ ಕಾರ್ಡ್ ಹೊಂದಿದ ಫಲಾನುಭವಿಗಳು ಗೊಂದಲಕ್ಕೆ ಈಡಾಗಬಹುದು ಏಕೆಂದರೆ, ಈ ಕೆವೈಸಿ ಎಲ್ಲಿ ಮಾಡಬೇಕು, ರೇಷನ್ ಕಾರ್ಡ್ ಕೆವೈಸಿ ಮಾಡಿಸಲು ಬೇಕಾಗುವ ದಾಖಲೆಗಳು, ಇತರ ರೇಷನ್ ಕಾರ್ಡ್ ಈ ಕೆವೈಸಿ ಸಂಬಂಧಪಟ್ಟಂತ ಸಂಪೂರ್ಣ ಮಾಹಿತಿಯನ್ನು ಈ ಒಂದು ಕೆಳಭಾಗದಲ್ಲಿ ನೀಡಲಾಗಿದೆ.
ಪ್ರತಿ ತಿಂಗಳು ರೇಷನ್ ಪಡೆಯಲು ಈ ಒಂದು ಕೆಲಸ ಮಾಡುವುದು ಕಡ್ಡಾಯ:
ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಅಧಿಕೃತವಾದ ಮಾಹಿತಿಯನ್ನು ಹೋರಡಿಸಿದೆ, ರೇಷನ್ ಕಾರ್ಡ್ ಹೊಂದಿರುವ ಗ್ರಾಹಕರು ತಮ್ಮ ಕಾರ್ಡ್ ನಲ್ಲಿರುವ ಎಲ್ಲಾ ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಎಂದು ಸೂಚನೆಯನ್ನು ನೀಡಿದೆ, ಮಾಡಸದೇ ಹೋದರೆ ಮುಂದಿನಿಂದ ಪ್ರತಿ ತಿಂಗಳು ನಿಮ್ಮ ರೇಷನ್ ಬರುವಲ್ಲ ಎಂದು ಹೇಳಿದ್ದಾರೆ. ಈ ಕೆವೈಸಿ ಮಾಡಲು ಕೆಳಗೆ ನೀಡಿರುವ ಮಾಹಿತಿಯನ್ನು ಅನುಸರಿಸಿ.
ರೇಷನ್ ಕಾರ್ಡ್ ಈಕೆವೈಸಿ ಏಕೆ ಮಾಡಿಸಬೇಕು:
- ಫಲಾನುಭವಿಗಳು ಪ್ರತಿ ತಿಂಗಳು ನೈಜ್ಯ ಆಹಾರ ಧಾನ್ಯಗಳನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈ ಕೆವೈಸಿ ಮಾಹಿತಿ ಹೊರಡಿಸಿದೆ.
- ನಕಲಿ ರೇಷನ್ ಕಾರ್ಡ್ ಗಳನ್ನು ಗುರುತಿಸಲು ಈ ಕೆವೈಸಿ ಮಾಡಿಸಲು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೂಚಿಸಿದೆ.
- ರೇಷನ್ ಕಾರ್ಡ್ ಗಳಲ್ಲಿ ಮರಣ ಹೊಂದಿದ ವ್ಯಕ್ತಿಗಳನ್ನು ಗುರುತಿಸಲು ಮತ್ತು ರೇಷನ್ ಕಾರ್ಡ್ ನಿಂದ ಅವರನ್ನು ತೆಗೆದು ಹಾಕಲು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈ ಕೆವೈಸಿ ಮಾಹಿತಿಯನ್ನು ಹೊರಡಿಸಿದೆ.
ರೇಷನ್ ಕಾರ್ಡ್ ಈ ಕೆವೈಸಿ ಎಲ್ಲಿ ಮಾಡಿಸಬೇಕು:
ರೇಷನ್ ಕಾರ್ಡ್ ಈ ಕೆವೈಸಿ ಮಾಡಿಸಲು ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಸದಸ್ಯರನ್ನು ಖುದ್ದು ನಿಮ್ಮ ಹತ್ತಿರದ ನ್ಯಾಯ ಬೆಲೆ ಅಂಗಡಿಯ ರೇಷನ್ ಕಾರ್ಡ್ ನಲ್ಲಿರುವ ಮೊಬೈಲ್ ಸಂಖ್ಯೆಯ ಸಮೇತ ಕಚೇರಿ ವೇಳೆಯ ಸಮಯದಲ್ಲಿ ಭೇಟಿ ನೀಡುವ ಮೂಲಕ ಕೆವೈಸಿ ಮಾಡಿಸಲು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೂಚನೆಯನ್ನು ಹೊರಡಿಸಿದೆ.
ರೇಷನ್ ಕಾರ್ಡ್ ಈ ಕೆವೈಸಿ ಮಾಡಿಸುವ ಕೊನೆಯ ದಿನಾಂಕ:
ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಥವಾ ಗ್ರಾಹಕರ ವ್ಯವಹಾರ ಇಲಾಖೆ ಅಧಿಸೂಚನೆ ಪ್ರಕಾರ ಆಗಸ್ಟ್ 31ರ ಒಳಗಾಗಿ ನಿಮ್ಮ ಹತ್ತಿರದ ನ್ಯಾಯ ಬೆಲೆ ಅಂಗಡಿಗೆ ಭೇಟಿ ನೀಡುವ ಮೂಲಕ ಈ ಮುಖ್ಯವಾಗಿ ಮಾಡಿಸಲು ಸರ್ಕಾರ ಹೇಳಿದೆ. ಇಷ್ಟರ ಒಳಗಾಗಿ ಈ ಕೆವೈಸಿ ಮಾಡಿಸದೆ ಹೋದರೆ ಮುಂದಿನ ಹಂತದಲ್ಲಿ ನಿಮಗೆ ದಂಡ ಬೀಳಬಹುದು ಮತ್ತು ಕಡ್ಡಾಯವಾಗಿ ರೇಷನ್ ಬಂದ್ ಮಾಡಬಹುದು.
ಮೊಬೈಲ್ ಮೂಲಕ ರೇಷನ್ ಕಾರ್ಡ್ ಈ ಕೆವೈಸಿ ಸ್ಥಿತಿಯನ್ನು ಹೀಗೆ ಚೆಕ್ ಮಾಡಿ:
ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಥವಾ ಗ್ರಾಹಕರ ವ್ಯವಹಾರ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ, ಮೊಬೈಲ್ ನಲ್ಲಿ ರೇಷನ್ ಕಾರ್ಡ್ ಈ ಕೆವೈಸಿ ಸ್ಥಿತಿ ಚೆಕ್ ಮಾಡಲು ಕೆಳಗೆ ನೀಡಿರುವ ಹಂತಗಳನ್ನು ಪಾಲನೆ ಮಾಡಿ.
ಮೊದಲಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಭೇಟಿ ನೀಡಿ ಕೆಳಗಡೆ ಲಿಂಕ್ ಮೇಲೆ ಕ್ಲಿಕ್ ಮಾಡಿ: https://ahara.kar.nic.in/Home/Home
ನಂತರದಲ್ಲಿ ಈ ಸೇವೆ ಆಯ್ಕೆಯನ್ನು ಆಯ್ದುಕೊಳ್ಳಿ, ನಂತರದಲ್ಲಿ ಈ ಸ್ಥಿತಿ ಆಯ್ಕೆ ಮೇಲೆ ಕ್ಲಿಕ್ ಮಾಡಿ, ಹೊಸ ಅಥವಾ ಹಾಲಿ ಪಂಡಿತರ ಚೀಟಿ ಸ್ಥಿತಿ ಮೇಲೆ ಕ್ಲಿಕ್ ಮಾಡಿ.
ಮುಂದಿನ ಹಂತದಲ್ಲಿ ಮೂರು ಜಿಲ್ಲೆಗಳ ಭಾಗಗಳನ್ನು ತೋರಿಸುತ್ತದೆ ಅದರಲ್ಲಿ ನಿಮ್ಮ ಜಿಲ್ಲೆ ಮೇಲೆ ಕ್ಲಿಕ್ ಮಾಡಿ, ಮುಂದೆವರಿಸಬೇಕು.
ಮುಂದಿನ ಹಂತದಲ್ಲಿ ರೇಷನ್ ಕಾರ್ಡ್ ವಿವರ ಆಯ್ಕೆ ಮೇಲೆ ಕ್ಲಿಕ್ ಮಾಡಿ, ಮತ್ತು ವಿಥ್ ಔಟ್ ಓಟಿಪಿ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ ಗೋ ಮೇಲೆ ಕ್ಲಿಕ್ ಮಾಡಿ, ಸದಸ್ಯರ ಏಣಿಕೆ ಆಯ್ಕೆಯಲ್ಲಿ ಸದಸ್ಯರ ಈ ಕೆವೈಸಿ ಸಲ್ಲಿಕೆ ಎಂದು ತೋರಿಸಿದರೆ ಮತ್ತು ಎಲ್ಲ ಸದಸ್ಯರ ಸಂಖ್ಯೆಗಳನ್ನು ತೋರಿಸಿದ್ದರೆ. ನಿಮ್ಮ ರೇಷನ್ ಕಾರ್ಡ್ ಈ ಕೆವೈಸಿ ಆಗಿದೆ ಎಂದು ಅರ್ಥ, ಒಮ್ಮೆ ಅಲ್ಲಿ ಈ ಕೆವೈಸಿ ಮಾಹಿತಿಯಲ್ಲಿ ಸದಸ್ಯರ ಸಂಖ್ಯೆ ತೋರಿಸದೆ ಇದ್ದರೆ ನಿಮ್ಮ ಈ ಕೆವೈಸಿ ಪೂರ್ಣಗೊಂಡಿಲ್ಲವೆಂದು ಅರ್ಥ. ಕೂಡಲೇ ಮೇಲ್ಗಡೆ ನೀಡಿರುವ ಎಲ್ಲ ದಾಖಲೆಗಳು ಮತ್ತು ಸಂಪೂರ್ಣ ಮಾಹಿತಿಯೊಂದಿಗೆ ನಿಮ್ಮ ಹತ್ತಿರದ ನ್ಯಾಯ ಬೆಲೆ ಅಂಗಡಿಗೆ ಭೇಟಿ ನೀಡುವ ಮೂಲಕ ಈ ಕೆವೈಸಿ ಯನ್ನು ಪೂರ್ಣಗೊಳಿಸಿ.
ಮುಂದಿನ ತಿಂಗಳಿನಿಂದ ರೇಷನ್ ಪಡೆಯಲು ಅರ್ಹತೆಯನ್ನು ಹೊಂದಿ ಅದೇ ರೀತಿಯಾಗಿ ಕರ್ನಾಟಕದ ಇತರ ಪ್ರಮುಖ ಮಾಹಿತಿಗಳಿಗಾಗಿ ನಮ್ಮ ಜಾಲತಾಣವನ್ನು ಅನುಸರಿಸಿ.