Ration Card: ಸುಮಾರು 10 ಲಕ್ಷಕ್ಕೂ ಹೆಚ್ಚು ರೇಷನ್ ಕಾರ್ಡ್ ರದ್ದು.! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ಹೀಗೆ ಚೆಕ್ ಮಾಡಿ!
Ration Card: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಬಿಪಿಎಲ್ ರೇಷನ್ ಕಾರ್ಡ್ ಅನ್ನು ಬಡತನ ರೇಖೆಗಿಂತ ಕೆಳಗಡೆ ಇರುವ ಜನರಿಗೆ ಕರ್ನಾಟಕ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಿದೆ. ಕೆಲವಷ್ಟು ಜನರು ಬಡತನ ರೇಖೆಗಿಂತ ಮೇಲ್ಗಡೆ ಇದ್ದರೂ ಸುಳ್ಳು ದಾಖಲೆಗಳನ್ನು ನೀಡಿ BPL ರೇಷನ್ ಕಾರ್ಡ್ ಗಳನ್ನು ಪಡೆದುಕೊಂಡಿದ್ದಾರೆ, ಅಂತ ಜನರನ್ನು ಪತ್ತೆ ಮಾಡುವ ಕಾರ್ಯವನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಡೆಸಿದೆ.
ಕರ್ನಾಟಕದಲ್ಲಿ 10,97,621 ಸುಳ್ಳು ದಾಖಲೆಗಳನ್ನು ನೀಡಿ ಪಡೆದುಕೊಂಡಿರುವ ಬಿಪಿಎಲ್ ರೇಷನ್ ಕಾರ್ಡ್ ಪತ್ತೆಯಾಗಿದೆ. ಇದರಲ್ಲಿ ಆದಾಯ ತೆರಿಗೆದಾರರು 98,431 ಜನರಾಗಿದ್ದು, 10,04,716 ಜನರು ಹೆಚ್ಚು ಆದಾಯವನ್ನು ಹೊಂದಿದ ಜನರಾಗಿದ್ದಾರೆ, ಇನ್ನುಳಿದ ಜನರು 4,036 ಸರಕಾರಿ ನೌಕರರಾಗಿದ್ದಾರೆ.
ಅಕ್ರಮ ಬಿಪಿಎಲ್ ರೇಷನ್ ಕಾರ್ಡ್:
ಕುಟುಂಬದಲ್ಲಿ ಸರಕಾರಿ ನೌಕರರು ಇದ್ದಲ್ಲಿ, ಆದಾಯ ತೆರಿಗೆ ಪಾವತಿದಾರರು, ನಾಲ್ಕು ಚಕ್ರದ ಬಿಳಿ ಬೋರ್ಡ್ ವಾಹನ ಹೊಂದಿದವರು, ಮತ್ತು ಒಂದೇ ಮನೆಯಲ್ಲಿ ವಾಸವಿದ್ದು ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಹೊಂದಿದವರು. ವಾರ್ಷಿಕವಾಗಿ 1.20 ಲಕ್ಷ ಆದಾಯ ಹೊಂದಿದವರು, 7.5 ಎಕರೆಗಿಂತ ಹೆಚ್ಚಿನ ಹೊಲ ಹೊಂದಿದವರು. ನಗರ ಪ್ರದೇಶದಲ್ಲಿ ಸಾವಿರ ಚದರ್ ವಿಸ್ತೀರ್ಣದ ಪಕ್ಕ ಮನೆ ಹೊಂದಿದವರು ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಅರ್ಹತೆ ಹೊಂದಿರುವುದಿಲ್ಲ.
ಸರಕಾರಿ ನೌಕರಿ ಮತ್ತು ಆದಾಯ ತೆರಿಗೆದಾರರು ಬಿಪಿಎಲ್ ರೇಷನ್ ಕಾರ್ಡ್ ಆಸೆಗಾಗಿ ಸುಳ್ಳು ದಾಖಲೆಗಳನ್ನು ನೀಡಿ, ಅಕ್ರಮ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪಡೆದುಕೊಂಡಿದ್ದಾರೆ. ಅಂತವರನ್ನು ಪತ್ತೆ ಮಾಡಿ ದಂಡವನ್ನು ವಿಧಿಸಲಾಗುತ್ತದೆ ಎಂದು ಸರಕಾರ ಹೇಳಿದೆ.
ಅಕ್ರಮವಾಗಿ ರೇಷನ್ ಕಾರ್ಡ್ ಪಡೆದ ದಿನದಿಂದ ಇಲ್ಲಿಯವರೆಗೆ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ದಂಡವನ್ನು ವಿಧಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಾಹಿತಿಯನ್ನು ತಿಳಿಸಿದೆ.
ರೇಷನ್ ಕಾರ್ಡ್ ರದ್ದಾದ ಪಟ್ಟಿಯನ್ನು ಚೆಕ್ ಮಾಡುವುದು ಹೇಗೆ:
ಅಕ್ರಮವಾಗಿ ರೇಷನ್ ಕಾರ್ಡ್ ಪಡೆದವರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಈ ಪಟ್ಟಿಯನ್ನು ನೋಡಲು ನೀವು ಆಹಾರ ಮತ್ತು ನಾಗರಿಕ ಸರಬರಾಜು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ನೀವು ರದ್ದಾದ ರೇಷನ್ ಕಾರ್ಡ್ ಪಟ್ಟಿಯನ್ನು ಸಂಪೂರ್ಣವಾಗಿ ನೋಡಬಹುದು.