New Ration Card: ಈ ದಿನದಂದು ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ.! ಆಹಾರ ಇಲಾಖೆಯಿಂದ ಎಲ್ಲರಿಗೂ ಗುಡ್ ನ್ಯೂಸ್!

News

New Ration Card: ಈ ದಿನದಂದು ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ.! ಆಹಾರ ಇಲಾಖೆಯಿಂದ ಎಲ್ಲರಿಗೂ ಗುಡ್ ನ್ಯೂಸ್!

New Ration Card: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಸಾಕಷ್ಟು ಜನ ಕಾಯ್ದುಕೊಳ್ಳುತ್ತಿದ್ದಾರೆ ಅಂತ ಜನರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಗುಡ್ ನ್ಯೂಸ್ ಅನ್ನು ನೀಡಿದೆ. ರೇಷನ್ ಕಾರ್ಡ್ ವಿತರಣೆ ತಡೆಯಿಂದಾಗಿ ಹೊಸ ರೇಷನ್ ಕಾರ್ಡ್ ಅರ್ಜಿ ಕರೆಯಲು ಸ್ವಲ್ಪ ತೊಂದರೆ ಆಗಿದೆ ಆದ್ದರಿಂದ ಸರಕಾರ ಕಡೆಯಿಂದ ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭದ ಬಗ್ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಒಂದು ಹೊಸ ರೇಷನ್ ಕಾರ್ಡ್ ಸಂಪೂರ್ಣ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ ಆದ್ದರಿಂದ ಸಂಪೂರ್ಣ ಓದಿ.

ಹೊಸ ರೇಷನ್ ಕಾರ್ಡ್ ಗೆ ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಯಾರು ಯಾರು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಬಯಸುವವರು ತಮ್ಮ ಮೊಬೈಲ್ ಮೂಲಕ ಅಥವಾ ಕಂಪ್ಯೂಟರ್ ಹಾಗೂ ತಮ್ಮ ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಹೊಸ ರೇಷನ್ ಕಾರ್ಡ್ ಸಲ್ಲಿಸಬಹುದಾಗಿದೆ.

ಈ ಹಿಂದೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದ ದಾಖಲೆಗಳ ಪರಿಶೀಲನೆ ಸೆಪ್ಟೆಂಬರ್ ಮೊದಲನೇ ವಾರದಲ್ಲಿ ನಡೆದಿದ್ದು, ಪರಿಶೀಲನೆ ಸಂಪೂರ್ಣವಾಗಿ ಮುಗಿದಿದೆ. ಹೊಸ ರೇಷನ್ ಕಾರ್ಡ್ ವಿತರಣೆಯಾದ ತಕ್ಷಣವೇ ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭವನ್ನು ಸೆಪ್ಟಂಬರ್ 15 ರಿಂದ 30ನೇ ತಾರೀಖಿನ ಒಳಗಾಗಿ ಯಾವುದಾದರೂ ಒಂದು ದಿನಗಳಲ್ಲಿ ಅರ್ಜಿ ಸಲ್ಲಿಸಲು ಕಲ್ಪಿಸಲಾಗುತ್ತದೆ, ಎಂದು ಆಹಾರ ಇಲಾಖೆ ಅಧಿಕೃತ ಮಾಹಿತಿಯನ್ನು ನೀಡಿದೆ.

ಕೆಳಗಡೆ ನೀಡಿರುವ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಪ್ರಾರಂಭವಾದಾಗ ತಕ್ಷಣ ಹೋಗಿ ಅರ್ಜಿ ಸಲ್ಲಿಸುವುದು ಸೂಕ್ತವಾಗಿದೆ ಮತ್ತು ದಾಖಲೆಗಳನ್ನು ಖಂಡಿತವಾಗಿ ಪರಿಶೀಲನೆ ಮಾಡಲಾಗುತ್ತದೆ ಎಂದು ಆಹಾರ ಇಲಾಖೆ ಸಚಿವರಾದ ಕೆಎಚ್ ಮುನಿಯಪ್ಪನವರು ತಿಳಿಸಿದ್ದಾರೆ.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

  • ಆಧಾರ್ ಕಾರ್ಡ್
  • ಜಾತಿ ಆದಾಯ ಪ್ರಮಾಣ ಪತ್ರ
  • ಮೊಬೈಲ್ ಸಂಖ್ಯೆ
  • ಅರ್ಜಿದಾರರ ಫೋಟೋ
  • ಜನನ ಪ್ರಮಾಣ ಪತ್ರ (5 ವರ್ಷದ ಒಳಗಿನ ಮಗುವಿದ್ದರೆ ಮಾತ್ರ)

ವಿಶೇಷ ಸೂಚನೆ: ಮೇಲ್ಗಡೆ ನೀಡಿರತಕ್ಕಂತ ದಾಖಲೆಗಳನ್ನು ಕೂಡಲೇ ಸರಿ ಮಾಡಿ ಇಟ್ಟುಕೊಳ್ಳಿ ಅರ್ಜಿ ಪ್ರಾರಂಭವಾದ ತಕ್ಷಣವೇ ನಮ್ಮ ವೆಬ್ಸೈಟ್ನಲ್ಲಿ ಅಪ್ಡೇಟ್ ತಿಳಿಸಲಾಗುತ್ತದೆ ಆದ್ದರಿಂದ ನಮ್ಮ ವೆಬ್ಸೈಟ್ ಅನುಸರಿಸಿ.