Ration Card: ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ.! ಇಲ್ಲಿದೆ ಅರ್ಜಿ ಸಲ್ಲಿಸುವ ದಿನಾಂಕ, ಈ ದಾಖಲೆಗಳು ಬೇಕು ನೋಡಿ!

News

Ration Card: ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ.! ಇಲ್ಲಿದೆ ಅರ್ಜಿ ಸಲ್ಲಿಸುವ ದಿನಾಂಕ, ಈ ದಾಖಲೆಗಳು ಬೇಕು ನೋಡಿ!

New Ration Card: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಕರ್ನಾಟಕ ರಾಜ್ಯದಲ್ಲಿ ಇತ್ತೀಚಿನ ದಿನಮಾನಗಳಲ್ಲಿ ರೇಷನ್ ಕಾರ್ಡ್ ಎಂಬ ವಸ್ತು ಎಷ್ಟು ಮುಖ್ಯವಾಗಿದೆ, ಎಂದರೆ ಮನೆಯ ಉಚಿತ ರೇಶನ್ ಹಿಡಿದು ರಾಜ್ಯದಲ್ಲಿ ಅಥವಾ ಕೇಂದ್ರದಲ್ಲಿ ಯಾವುದಾದರೂ ಯೋಜನೆ ಬಿಡುಗಡೆ ಆದ್ರೆ ಆ ಯೋಜನೆಗೆ ಅರ್ಜಿ ಸಲ್ಲಿಸಲು ಈ ಒಂದು ದಾಖಲೆ ಕಡ್ಡಾಯವಾಗಿ ಬೇಕಾಗಿದೆ. ರಾಜ್ಯದಲ್ಲಿ ಹೆಚ್ಚಿನ ಜನರ ಬಳಿ ಈ ಒಂದು ರೇಷನ್ ಕಾರ್ಡ್ ಇಲ್ಲದೇ ಇರುವುದರಿಂದ ಉಚಿತ ರೇಷನ್ ಪಡೆಯಲು ಮತ್ತು ರಾಜ್ಯದ ಯೋಜನೆಗಳಿಂದ ವಂಚಿತರಾಗಿದ್ದಾರೆ.

ಅದೇ ರೀತಿಯಾಗಿ ರಾಜ್ಯದಲ್ಲಿ ಅಕ್ರಮವಾಗಿ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡವರ ಕಾರ್ಡ್ ಈಗಾಗಲೇ ರಾಜ್ಯ ಸರ್ಕಾರ ರದ್ದುಗೊಳಿಸಿ ಮತ್ತು ದಂಡವನ್ನು ವಿಧಿಸುವ ವ್ಯವಸ್ಥೆಯನ್ನು ಮಾಡುತ್ತಿದೆ. ಇದರ ಬೆನ್ನಲ್ಲೇ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವ ಜನರಿಗೆ ರಾಜ್ಯ ಸರ್ಕಾರ ಮತ್ತು ಆಹಾರ ಇಲಾಖೆ ಗುಡ್ ನ್ಯೂಸ್ ಅನ್ನು ನೀಡಿದೆ ಇದರ ಸಂಪೂರ್ಣ ಮಾಹಿತಿ ಕೆಳಭಾಗದಲ್ಲಿ ನೀಡಲಾಗಿದೆ ಆದ್ದರಿಂದ ಈ ಸಂಪೂರ್ಣ ಮಾಹಿತಿಯನ್ನು ಓದಿ.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ:

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾದ ಕೆಎಚ್ ಮುನಿಯಪ್ಪನವರು ಈಗಾಗಲೇ ಹೇಳಿಕೆಯನ್ನು ನೀಡಿದ್ದಾರೆ ಏನು ಎಂದರೆ ಅಕ್ರಮವಾಗಿ ಬಿಪಿಎಲ್ ರೇಷನ್ ಕಾರ್ಡ್ ಪಡೆದವರ ವಿರುದ್ಧ ಕ್ರಮ ಕೈಗೊಂಡು ಮತ್ತು ಅವರ ರೇಷನ್ ಕಾರ್ಡ್ ರದ್ದು ಮಾಡಿ. ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದವರ ದಾಖಲೆಗಳನ್ನು ಪರಿಶೀಲನೆ ಮಾಡಿ ಇದೇ ತಿಂಗಳ ಮೊದಲನೇ ವಾರದಲ್ಲಿ ವಿತರಣೆ ಮಾಡುತ್ತೇವೆ, ಹಾಗೆ ಇದೆ ತಿಂಗಳು ಅಂದರೆ ಸೆಪ್ಟಂಬರ್ 15 ರಿಂದ 30ನೇ ತಾರೀಕಿನ ಒಳಗಾಗಿ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶವನ್ನು ಮಾಡಿಕೊಡಲಾಗುತ್ತದೆ ಎಂದು ಹೇಳಿದ್ದಾರೆ.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಈ ದಾಖಲೆಗಳು ಬೇಕು:

  • ಆಧಾರ್ ಕಾರ್ಡ್
  • ಜಾತಿ ಆದಾಯ ಪ್ರಮಾಣ ಪತ್ರ
  • ಗುರುತಿನ ಚೀಟಿ
  • ಅರ್ಜಿದಾರರ ಫೋಟೋ
  • ಮೊಬೈಲ್ ಸಂಖ್ಯೆ
  • ಡ್ರೈವಿಂಗ್ ಲೈಸೆನ್ಸ್ (ಇದ್ದಲ್ಲಿ ಮಾತ್ರ)
  • ಜನನ ಪ್ರಮಾಣ ಪತ್ರ (5 ವರ್ಷಕ್ಕಿಂತ ಒಳಗಡೆ ಮಗು ಇದ್ದರೆ ಮಾತ್ರ)

ಈ ಮೇಲ್ಗಡೆ ನೀಡಿರುವ ದಾಖಲೆಗಳೊಂದಿಗೆ ನಿಮ್ಮ ಹತ್ತಿರದ ಸೇವಾಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭವಾದಾಗ ನಮ್ಮ ಈ ಒಂದು ವೆಬ್ಸೈಟ್ನಲ್ಲಿ ತಕ್ಷಣ ಮಾಹಿತಿಯನ್ನು ನೀಡುತ್ತೇವೆ ಮತ್ತು ನೀವು ಕೂಡಲೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ.