Labour Card Scholarship: ಲೇಬರ್ ಕಾರ್ಡ್ ಹೊಂದಿದವರಿಗೆ ಸಿಹಿಸುದ್ದಿ.! ₹11,000 ವಿದ್ಯಾರ್ಥಿವೇತನಕ್ಕೆ ಅರ್ಜಿ ಪ್ರಾರಂಭ!
Labour Card Scholarship: ನಮಸ್ಕಾರ ಎಲ್ಲಾ ಕನ್ನಡ ಜನತೆ, ಕರ್ನಾಟಕ ರಾಜ್ಯವು ಕಾರ್ಮಿಕರ ಎಲ್ಲ ಕುಟುಂಬದ ಜನರಿಗೆ ಲೇಬರ್ ಕಾರ್ಡ್ ಎಂಬ ಒಂದು ಕಾರ್ಡ್ ನೀಡುವ ಮೂಲಕ ಹಲವಾರು ಪ್ರಯೋಜನಗಳನ್ನು ಮಾಡಿಕೊಟ್ಟಿದೆ. ಅದೆ ರೀತಿಯಾಗಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಸಹ ನೀಡುತ್ತಿದೆ, ವಿದ್ಯಾರ್ಥಿಗಳಿಗೆ ₹1,100 ರಿಂದ ₹11,000 ವರೆಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ ಇದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ ಆದ್ದರಿಂದ ಸಂಪೂರ್ಣವಾಗಿ ಓದಿ.
ಕಾರ್ಮಿಕರ ವರ್ಗಕ್ಕೆ ಸೇರಿದ ಮತ್ತು ಕಾರ್ಮಿಕ ಕಾರ್ಡ್ ಹೊಂದಿರುವ ವಿದ್ಯಾರ್ಥಿಗಳು ಮಾತ್ರ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ವಿದ್ಯಾರ್ಥಿಗಳ ಆರ್ಥಿಕ ಶಿಕ್ಷಣ ಸುಧಾರಿಸಲು ಮತ್ತು ತಮ್ಮ ಶಿಕ್ಷಣಕ್ಕೆ ಉಪಯೋಗ ಆಗಲು ಈ ಒಂದು ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ.
ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಅರ್ಹತೆಗಳು?
ಕರ್ನಾಟಕದ ಖಾಯಂ ನಿವಾಸಿಯಾಗಿದ್ದರೆ ಮಾತ್ರ ಈ ಒಂದು ವಿದ್ಯಾರ್ಥಿ ವೇತನ ಪಡೆದುಕೊಳ್ಳಬಹುದು.
ಎಸ್ಸಿ/ಎಸ್ಟಿ ವರ್ಗಕ್ಕೆ ಸೇರುವ ಅಭ್ಯರ್ಥಿಗಳು 45% ಅಂಕಗಳನ್ನು ಗಳಿಸಬೇಕು, ಇತರ ಎಲ್ಲಾ ಅಭ್ಯರ್ಥಿಗಳು 50% ಅಂಕಗಳನ್ನು ಗಳಿಸಬೇಕು.
ವಾರ್ಷಿಕ ಆದಾಯವು ₹35,000 ಕ್ಕಿಂತ ಕಡಿಮೆ ಇರಬೇಕು.
ಕಾರ್ಮಿಕ ಕಾರ್ಡ್ ಹೊಂದಿರಬೇಕು.
ಲೇಬರ್ ಕಾರ್ಡ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?
- ನಿಮ್ಮ ಆಧಾರ್ ಕಾರ್ಡ್
- ಪೋಷಕರ ಆಧಾರ್ ಕಾರ್ಡ್
- ನಿಮ್ಮ ಪೋಷಕರ ಕಾರ್ಮಿಕರ ಕಾರ್ಡ್
- ಶೈಕ್ಷಣಿಕ ಪ್ರಮಾಣ ಪತ್ರ
- ಜಾತಿ ಮತ್ತು ನಿವಾಸ ಪ್ರಮಾಣ ಪತ್ರ
- ವಾರ್ಷಿಕ ಆದಾಯ ಪುರಾವೆಗಳು
ಲೇಬರ್ ಕಾರ್ಡ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಲೇಬರ್ ಕಾರ್ಡ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಮೊದಲಿಗೆ ಕೆಳಗಡೆ ನೀಡಿರುವ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ: klwbapps.karnataka.gov.in
ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ ಮತ್ತು ಅಲ್ಲಿ ಕೇಳಿರುವ ದಾಖಲೆಗಳನ್ನು ಸಂಪೂರ್ಣವಾಗಿ ನೀಡಿ, ಅರ್ಜಿಯನ್ನು ಸಬ್ಮಿಟ್ ಮಾಡಿ. ಅಲ್ಲಿ ನೀವು ನಿಮಗೆ ಎಷ್ಟು ಹಣ ಬಂದಿದೆ ಎಂಬುದರ ಮಾಹಿತಿ ನೋಡಬಹುದು.
ಲೇಬರ್ ಕಾರ್ಡ್ ವಿದ್ಯಾರ್ಥಿವೇತನದ ಮೊತ್ತ?
- 1 ರಿಂದ 4ನೇ ತರಗತಿಯ ವಿದ್ಯಾರ್ಥಿಗಳಿಗೆ: ₹1,100
- 5 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ: ₹1,250
- 9 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ: ₹3,000
- 11 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ: 4,600
- ಸ್ನಾತಕೋತ್ತರ ಪದವಿ ಯರಿಗೆ: ₹10,000
- B.Tech, B.E: ₹10,000
- ITI: ₹4,600
- B.Sc, ಪ್ಯಾರಾ ಮೆಡಿಕಲ್, ನರ್ಸಿಂಗ್: ₹10,000
- ವೈದ್ಯಕೀಯ ಶಿಕ್ಷಣ: ₹11,000
- Ph.D ಮತ್ತು M.phil: ₹11,000
- B.Ed: ₹6,000
- LLB ಮತ್ತು LLM: ₹10,000
- D.Ed: ₹4,600