Breaking News: KSRTC ಬಸ್ ನಲ್ಲಿ ಉಚಿತ ಪ್ರಯಾಣಿಸುವರಿಗೆ ಕಹಿಸುದ್ದಿ.! ಟಿಕೆಟ್ ದರ ಸಂಪೂರ್ಣ ಏರಿಕೆ!
KSRTC Breaking News: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಅದರಲ್ಲಿ ಒಂದು ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ರಾಜ್ಯಾದ್ಯಂತ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡಬಹುದು ಇದರ ಪರಿಣಾಮದಿಂದ ಉಳಿದ ಪ್ರಯಾಣಿಕರಿಗೆ ಕಷ್ಟವಾಗುತ್ತಿದೆ ಆದ್ದರಿಂದ ಇನ್ನು ಮುಂದೆ ಎಲ್ಲ ಪ್ರಯಾಣಿಕರಿಗೆ ಕಹಿ ಸುದ್ದಿಯನ್ನು ನೀಡಿದೆ. ರಾಜ್ಯ ಸರ್ಕಾರ ಇದರ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ, ಆದ್ದರಿಂದ ಸಂಪೂರ್ಣವಾಗಿ ಓದಿ.
ಶಕ್ತಿ ಯೋಜನೆಯಿಂದಾಗಿ ಬಸ್ಗಳಲ್ಲಿ ಸಾಕಷ್ಟು ರಷ್ ಆಗುತ್ತಿದೆ ಮತ್ತು ಸಾಕಷ್ಟು ಗಲಾಟೆಗಳು ಆಗುತ್ತಿವೆ ಅದರ ಬೆನ್ನಲ್ಲೇ ರಾಜ್ಯ ಸರ್ಕಾರಕ್ಕೆ ಸಾಕಷ್ಟು ನಷ್ಟ ಉಂಟಾಗುತ್ತಿದೆ ಇದರ ಇದರ ವಿಷಯದಿಂದಾಗಿ ಕೆಎಸ್ಆರ್ಟಿಸಿ ಬಸ್ ಪ್ರಯಾಣದರ ಹೆಚ್ಚಳ ಖಚಿತವಾಗಲಿದೆ ಎಂದು ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಮಾಹಿತಿಯನ್ನು ನೀಡಿದ್ದಾರೆ.

ಬಿಜೆಪಿ ಸರ್ಕಾರವು ಕಳೆದು 5 ವರ್ಷ ಹಿಂದೆ 5,900 ಕೋಟಿ ನಷ್ಟಕ್ಕೆ ಈಡು ಮಾಡಿ ಹೋಗಿದೆ. ಈಗ ಸಾರಿಗೆ ಸಂಸ್ಥೆಗಳ ಪಾಡೇನು ಮತ್ತು ಉಚಿತ ಬಸ್ ಪ್ರಯಾಣಗಳ ನಷ್ಟದ ಬಗ್ಗೆ ತಾವು ಉತ್ತರ ನೀಡುವಿರಾ ಎಂದು ಪ್ರತಿಪಕ್ಷದ ನಾಯಕರದ ಆರ್ ಅಶೋಕ್ ವಿರುದ್ಧ ಹೇಳಿಕೆಯನ್ನು ನೀಡಿದ್ದಾರೆ.
KSRTC ಬಸ್ ಟಿಕೆಟ್ ದರ ಏರಿಕೆ:
ಜುಲೈ 14ರಂದು ಕೆಎಸ್ಆರ್ಟಿಸಿ ಇಲಾಖೆಯ ಅಧ್ಯಕ್ಷರಾದ ಗುಬ್ಬಿ ಶಾಸಕರು ಎಸ್ ಆರ್ ಶ್ರೀನಿವಾಸ್ ಕಳೆದ ತಿಂಗಳಲ್ಲಿ 295 ಕೋಟಿ ನಷ್ಟವಾಗಿದೆ, ಟಿಕೆಟ್ ದರ ಏನಾದರೂ ಏರಿಸದಿದ್ದರೆ ಸಾರಿಗೆ ಸಂಸ್ಥೆಗಳನ್ನು ಮುಚ್ಚಬೇಕಾಗುತ್ತದೆ ಎಂದು ಹೇಳಿದ್ದಾರೆ. ಸದ್ಯದಲ್ಲೇ ಕೆಎಸ್ಆರ್ಟಿಸಿ ಬಸ್ ಗಳ ಟಿಕೆಟ್ ದರ ಏರಿಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ, ಮೊನ್ನೆ ಸಾರಿಗೆ ನಿಗಮದ ಮೀಟಿಂಗ್ನಲ್ಲಿ ಶೇಕಡ 15 ರಿಂದ 20 ರಷ್ಟು ಟಿಕೆಟ್ ದರ ಏರಸಲ್ಲಿ ಇದ್ದೇವೆ ಎಂದು ಮಾಹಿತಿ ತಿಳಿಸಿದ್ದಾರೆ.
ಪ್ರತಿ ಬಾರಿಯೂ ನಷ್ಟಕ್ಕೆ ಇಡಾದರೆ ಸರಕಾರಕ್ಕೆ ಹೇಳುವುದು ಸರಿಯಲ್ಲ, ನಷ್ಟವನ್ನು ಸರಿಪಡಿಸಿಕೊಳ್ಳಲು ಮತ್ತು ಸಾರಿಗೆ ಸಂಸ್ಥೆಗಳನ್ನು ಉಳಿಸಲು ಟಿಕೆಟ್ ದರವನ್ನು ಹೆಚ್ಚಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.