KSRTC ಯಲ್ಲಿ ಉಚಿತ ಪ್ರಯಾಣಿಸುವ ಮಹಿಳೆಯರಿಗೆ ರಾತ್ರೋರಾತ್ರಿ ಹೊಸ ರೂಲ್ಸ್.! ಇಂದು ರಾಜ್ಯಾದ್ಯಂತ ಎಲ್ಲಡೆ ಜಾರಿ!
KSRTC New Rules: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದ ನಂತರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಅದರಲ್ಲಿ ಒಂದು ಶಕ್ತಿ ಯೋಜನೆ ಆಗಿದೆ. ಈ ಒಂದು ಯೋಜನೆ ಅಡಿಯಲ್ಲಿ ಮಹಿಳೆಯರು ರಾಜ್ಯಾದ್ಯಂತ ಉಚಿತ ಬಸ್ ಪ್ರಯಾಣ ಮಾಡಬಹುದಾಗಿದೆ ಇಂತ ಸಂದರ್ಭದಲ್ಲಿ ಮಹಿಳೆಯರಿಗೆ ಇನ್ನು ಮುಂದಿನಿಂದ ಉಚಿತ ಬಸ್ ಪ್ರಯಾಣ ಮಾಡಲು ಹೊಸ ರೂಲ್ಸ್ ಅನ್ನು ಜಾರಿಗೆ ತಂದಿದೆ ರಾಜ್ಯ ಸರ್ಕಾರ ಆ ರೂಲ್ಸ್ ಯಾವುದು ಎಂಬುದನ್ನು ಕೆಳಗಡೆ ನೀಡಲಾಗಿದೆ ಆದ್ದರಿಂದ ಸಂಪೂರ್ಣವಾಗಿ ಓದಿ.
KSRTC ಹೊಸ ರೂಲ್ಸ್:
ಶಕ್ತಿ ಯೋಜನೆಯಿಂದ ರಸ್ತೆ ಸಾರಿಗೆ ಸಂಚಾರ ಇಲಾಖೆಗೆ ಸಾಕಷ್ಟು ನಷ್ಟ ಉಂಟಾಗಿದ್ದು ಆದ್ದರಿಂದ ಬಸ್ ನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರ ಟಿಕೆಟ್ ದರ ಏರಿಕೆ ಮಾಡುವ ಸುದ್ದಿ ಸಾಕಷ್ಟು ಖಾಸಗಿ ಜಾಲತಾಣಗಳಲ್ಲಿ ಮಾಹಿತಿ ನೀಡಿದ್ದರು. ಆದ್ದರಿಂದ ಸಾಕಷ್ಟು ಜನರು ಆಕ್ರೋಶಗೊಂಡು ಸರ್ಕಾರಕ್ಕೆ ವರದಿ ಮಾಡಿದಾಗ ಯಾವುದೇ ಟಿಕೆಟ್ ದರ ಏರಿಕೆ ಮಾಡದೆ. ಶಕ್ತಿ ಯೋಜನೆ ಅಡಿಯಲ್ಲಿ ಉಚಿತ ಪ್ರಯಾಣ ಮಾಡುವ ಮಹಿಳೆಯರಿಗೆ ಹೊಸ ರೂಲ್ಸ್ ಅನ್ನು ಜಾರಿಗೆ ತಂದಿದ್ದಾರೆ.
KSRTC ಉಚಿತ ಪ್ರಯಾಣಿಸುವ ಮಹಿಳೆಯರಿಗೆ ಹೊಸ ರೂಲ್ಸ್:
ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಕೆಲವಷ್ಟು ಹೊಸ ರೂಲ್ಸ್ ಅನ್ನು ಸಾರಿಗೆ ಸಂಚಾರ ಇಲಾಖೆ ಜಾರಿಗೊಳಿಸಿದೆ. ಮಹಿಳೆಯರು ಬಸ್ಸಿನಲ್ಲಿ ಪ್ರಯಾಣಿಸುವಾಗ ತಮಗೆ ಉಚಿತ ಟಿಕೆಟ್ ನೀಡುವುದರ ಜೊತೆಗೆ ತಮ್ಮ ಜೊತೆ ತೆಗೆದುಕೊಂಡ ಹೋದ ಲಗೇಜ್ ಗಳಿಗೆ ಟಿಕೆಟ್ ದರವನ್ನು ಏರಿಕೆ ಮಾಡಲಾಗುತ್ತದೆ ಎಂದು ಮಾಹಿತಿಯನ್ನು ನೀಡಿದ್ದಾರೆ. ಮಹಿಳೆಯರು ಸೀಟ್ಗಳ ಮೇಲೆ ಲಗೇಜ್ ಇಡುವಂತಿಲ್ಲ, ಮಹಿಳೆಯರು ಬಸ್ಗಳಲ್ಲಿ ಯಾವುದೇ ಗಲಾಟೆ ಮಾಡದೆ ಶಾಂತತೆಯನ್ನು ಕಾಪಾಡಿಕೊಳ್ಳಬೇಕು ಇಲ್ಲದಿದ್ದರೆ ಅಂತ ಮಹಿಳೆಯರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಖಡಕ್ಕಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
ಮಹಿಳೆಯರಿಗೆ ಹೊಸ ರೂಲ್ಸ್ ಯಾಕೆ:
ಕಳೆದ ತಿಂಗಳಿನಿಂದ ರಸ್ತೆ ಸಾರಿಗೆ ಸಂಚಾರ ಇಲಾಖೆಗೆ ಶಕ್ತಿ ಯೋಜನೆಯಿಂದಾಗಿ ಸಾಕಷ್ಟು ನಷ್ಟ ಉಂಟಾಗಿದೆ, ಆದ್ದರಿಂದ ನಷ್ಟವನ್ನು ಪರಿಹರಸದೆ ಎಲ್ಲ ಪ್ರಯಾಣಿಕರ ಟಿಕೆಟ್ ಏರಿಕೆ ಮಾಡುವುದಾಗಿ ಸರ್ಕಾರ ನಿರ್ಧರಿಸಿತ್ತು ಆದರೆ ಸಾಕಷ್ಟು ಜನರು ಅದನ್ನು ನಿರಾಕರಿಸಿದರು ಆದ್ದರಿಂದಾಗಿ ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಈ ಹೊಸ ರೂಲ್ಸ್ ಗಳನ್ನು ಜಾರಿಗೆ ತಂದಿದ್ದಾರೆ.