KSRTC ಬಸ್ ನಲ್ಲಿ ಪ್ರಯಾಣಿಸುವವರಿಗೆ ರಾತ್ರೋರಾತ್ರಿ ಕಹಿಸುದ್ದಿ.! ಇಂದು ರಾಜ್ಯಾದ್ಯಂತ ಜಾರಿ, ಎಲ್ಲ ಪ್ರಯಾಣಿಕರು ತಿಳಿಯಲೇಬೇಕು!

News

KSRTC ಬಸ್ ನಲ್ಲಿ ಪ್ರಯಾಣಿಸುವವರಿಗೆ ರಾತ್ರೋರಾತ್ರಿ ಕಹಿಸುದ್ದಿ.! ಇಂದು ರಾಜ್ಯಾದ್ಯಂತ ಜಾರಿ, ಎಲ್ಲ ಪ್ರಯಾಣಿಕರು ತಿಳಿಯಲೇಬೇಕು!

KSRTC Ticket Price Hike: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ರಾಜ್ಯದಲ್ಲಿ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ರಾತ್ರೋರಾತ್ರಿ ರಾಜ್ಯ ಸರ್ಕಾರ ಕಹಿಸುದ್ದಿ ನೀಡಿದೆ. ಅಂದರೆ ಬಸ್ ಪ್ರಯಾಣದ ಟಿಕೆಟ್ ದರವನ್ನು ಇಷ್ಟರವರೆಗೆ ಏರಿಸಲಾಗುತ್ತದೆ ಎಂದು ಮಾಹಿತಿಯನ್ನು ನೀಡಿದ್ದಾರೆ, ಟಿಕೆಟ್ ದರವನ್ನು ಎಷ್ಟು ಏರಿಸಲಾಗುತ್ತದೆ ಮತ್ತು ಯಾವ ಪರಿಣಾಮಕ್ಕಾಗಿ ಟಿಕೆಟ್ ದರವನ್ನು ಏರಿಕೆ ಮಾಡಲಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನ ಕೆಳಭಾಗದಲ್ಲಿ ನೀಡಲಾಗಿದೆ ಆದ್ದರಿಂದ ಸಂಪೂರ್ಣವಾಗಿ ಓದಿ.

Bus Ticket Price Hike ಬಸ್ ಟಿಕೆಟ್ ದರ ಏರಿಕೆ:

ಕಳೆದ ಜುಲೈ ತಿಂಗಳ 14ನೇ ತಾರೀಕಿನಂದು ಗುಬ್ಬಿ ಶಾಸಕರಾದ ಎಸ್ ಆರ್ ಶ್ರೀನಿವಾಸ್ ಅವರು KSRTC ಇಲಾಖೆಯು 295 ಕೋಟಿ ರೂಪಾಯಿ ನಷ್ಟಕ್ಕೆ ಈಡಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಆದ ಕಾರಣಕ್ಕೆ KSRTC ಬಸ್ ಟಿಕೆಟ್ ದರವನ್ನು ಏರಿಕೆ ಮಾಡದಿದ್ದರೆ KSRTC ಇಲಾಖೆಗಳನ್ನು ಮುಚ್ಚಿಕೊಂಡು ಹೋಗಬೇಕಾಗುತ್ತದೆ ಎಂದು ಸಹ ಹೇಳಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಬಸ್ ಟಿಕೆಟ್ ದರವನ್ನು ಏರಿಕೆ ಮಾಡಲಾಗುತ್ತದೆ ಎಂದು ಮಾಹಿತಿಯನ್ನು ನೀಡಿದ್ದಾರೆ, ಹಿಂದಿನ ದಿನದಂದು ನಡೆದ ರಸ್ತೆ ಸಾರಿಗೆ ಇಲಾಖೆ ಸಭೆಯಲ್ಲಿ ಟಿಕೆಟ್ ದರವನ್ನು ಶೇಕಡ 15 ರಿಂದ 20 ವರೆಗೆ ಬೆಲೆ ಏರಿಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರತಿ ಬಾರಿಯೂ ಸಾರಿಗೆ ಸಂಸ್ಥೆಗೆ ನಷ್ಟ ಉಂಟಾದಾಗ ರಾಜ್ಯ ಸರ್ಕಾರಿ ಕ್ಕೆ ಹೇಳುವುದು ಸರಿಯಲ್ಲ ಮತ್ತು ನಷ್ಟಗಳನ್ನು ಸರಿಪಡಿಸಲು ಮತ್ತು ಸಾರಿಗೆ ಸಂಸ್ಥೆಗಳನ್ನು ಉಳಿಸಿಕೊಳ್ಳಲು ಕಡ್ಡಾಯವಾಗಿ ಟಿಕೆಟ್ ದರವನ್ನು ಏರಿಸಲೇ ಬೇಕಾಗುತ್ತದೆ ಎಂದು ಹೇಳಿದ್ದಾರೆ.

KSRTC ಬಸ್ ಟಿಕೆಟ್ ದರ ಯಾಕೆ ಏರಿಕೆ ಮಾಡುತ್ತಿದ್ದಾರೆ:

ಈಗಾಗಲೇ ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿತ್ತು ಅದರಲ್ಲಿ ಒಂದು ಶಕ್ತಿ ಯೋಜನೆ ಆಗಿದೆ, ಈ ಯೋಜನೆ ಅಡಿಯಲ್ಲಿ ಮಹಿಳೆಯರು ರಾಜ್ಯಾದ್ಯಂತ ಬಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಸ ಪ್ರಯಾಣಿಸುವುದರಿಂದಾಗಿ ರಾಜ್ಯ ರಸ್ತೆ ಸಾರಿಗೆ ಇಲಾಖೆಗೆ ಸಾಕಷ್ಟು ನಷ್ಟ ಉಂಟಾಗಿದೆ. ಅದೇ ರೀತಿಯಾಗಿ ರಸ್ತೆ ಸಾರಿಗೆ ಇಲಾಖೆ ಮೇಲೆ ಸಾಕಷ್ಟು ಸಾಲದಿಂದಾಗಿ ಟಿಕೆಟ್ ದರವನ್ನು ಏರಿಕೆ ಮಾಡಲು ಪ್ರಮುಖ ಮಾಹಿತಿಗಳಾಗಿವೆ.

Leave a Reply

Your email address will not be published. Required fields are marked *