KSRTC ಬಸ್ ನಲ್ಲಿ ಪ್ರಯಾಣಿಸುವವರಿಗೆ ಬೆಳ್ಳಂ ಬೆಳಗೆ ಸಿಹಿಸುದ್ದಿ.! ಇಂದು ಇಡಿ ರಾಜ್ಯಾದ್ಯಂತ ಜಾರಿ!

News

KSRTC ಬಸ್ ನಲ್ಲಿ ಪ್ರಯಾಣಿಸುವವರಿಗೆ ಬೆಳ್ಳಂ ಬೆಳಗೆ ಸಿಹಿಸುದ್ದಿ.! ಇಂದು ಇಡಿ ರಾಜ್ಯಾದ್ಯಂತ ಜಾರಿ!

KSRTC Good News: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ರಾಜ್ಯದಲ್ಲಿ ಬಸ್ ಗಳಲ್ಲಿ ಪ್ರಯಾಣಿಸುವ ಜನರಿಗೆ ಬೆಳ್ಳಂಬೆಳಗೆ ರಸ್ತೆ ಸಾರಿಗೆ ಸಂಚಾರ ಇಲಾಖೆಯು ಸಿಹಿ ಸುದ್ದಿಯನ್ನು ನೀಡಿದೆ. ಇತ್ತೀಚಿನ ಹಿಂದಿನ ದಿನಗಳಲ್ಲಿ ಬಸ್ ಟಿಕೆಟ್ ದರ ಇಷ್ಟರವರೆಗೆ ಏರಿಕೆ ಮಾಡಲಾಗುತ್ತದೆ ಎಂದು ಮಾಹಿತಿಯನ್ನು ನೀಡಿದ್ದರು, ಇದರ ಕುರಿತು ಇವಾಗ ಬಸ್ ನಲ್ಲಿ ಪ್ರಯಾಣಿಸುವ ಜನರಿಗೆ ಒಂದು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ಇದರ ಸಂಪೂರ್ಣ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ ಆದ್ದರಿಂದ ಸಂಪೂರ್ಣ ಓದಿ.

Bus Ticket Price ಬಸ್ ಟಿಕೆಟ್ ದರ:

ಕೆಲವಷ್ಟು ದಿನಗಳ ಹಿಂದೆ ರಸ್ತೆ ಸಾರಿಗೆ ಸಂಚಾರ ಇಲಾಖೆಯ ಸಚಿವರಾದ ರಾಮಲಿಂಗ ರೆಡ್ಡಿ ಅವರು ರಾಜ್ಯದಲ್ಲಿ ಶಕ್ತಿ ಯೋಜನೆವು ಜಾರಿಗೆ ಬಂದ ನಂತರ ರಸ್ತೆ ಸಾರಿಗೆ ಸಂಚಾರ ಇಲಾಖೆಗೆ ಸಾಕಷ್ಟು ನಷ್ಟ ಉಂಟಾಗಿದೆ. ಮತ್ತು ಬಸ್ಸುಗಳಲ್ಲಿ ಗಲಾಟೆಯಿಂದಾಗಿ ಸಾಕಷ್ಟು ಬಸ್ಸುಗಳಿಗೆ ಹಾನಿ ಉಂಟಾಗಿದೆ, ಈ ಒಂದು ಕಾರಣದಿಂದ ಹಿಂದಿನ ದಿನದಂದು ರಸ್ತೆ ಸಾರಿಗೆ ಸಂಚಾರ ಸಭೆಯಲ್ಲಿ ಬಸ್ ಟಿಕೆಟ್ ದರ ಏರಿಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದರು. ಈ ಒಂದು ಮಾಹಿತಿಯಿಂದಾಗಿ ಸಾಕಷ್ಟು ರಾಜ್ಯದಲ್ಲಿ ಜನರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ, ಈ ಒಂದು ಕಾರಣಕ್ಕಾಗಿ ರಾಜ್ಯದ ಜನತೆಗೆ ಸಚಿವರಾದ ರಾಮಲಿಂಗ ರೆಡ್ಡಿಯವರು ಸಿಹಿ ಸುದ್ದಿಯನ್ನು ನೀಡಿದ್ದಾರೆ.

KSRTC ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ:

ಮುಂದಿನ ದಿನಗಳಿಂದ ಯಾವುದೇ ಟಿಕೆಟ್ ದರ ಏರಿಕೆ ಮಾಡುವುದಿಲ್ಲ ಹಾಗೂ ಶಕ್ತಿ ಯೋಜನೆಯಿಂದ ಉಂಟಾದ ನಷ್ಟವನ್ನು ಶಕ್ತಿ ಯೋಜನೆಯಿಂದ ಲಾಭ ಪಡೆಯುವಂತೆ ಮಾಡುತ್ತೇವೆ ಎಂದು ಮಾಹಿತಿಯನ್ನು ನೀಡಿದ್ದಾರೆ. ಅಂದರೆ ಇವರ ಪ್ರಕಾರ ಇನ್ನು ಮುಂದೆ ಶಕ್ತಿ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಇನ್ನು ಮುಂದಿನಿಂದ ಹೊಸ ರೂಲ್ಸ್ ಜಾರಿ ಮಾಡುತ್ತೇವೆ, ಎಂದು ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿಯವರು ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ.