Gruhalakshmi Yojana: ಗೃಹಲಕ್ಷ್ಮಿ ಜುಲೈ, ಆಗಸ್ಟ್ ತಿಂಗಳ ಹಣ ಈ ದಿನದಂದು ಖಾತೆ ಜಮಾ.! ಲಕ್ಷ್ಮಿ ಹೆಬ್ಬಾಳ್ ಅವರಿಂದ ಸ್ಪಷ್ಟನೆ!
Gruhalakshmi Yojana Payment: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಮಹಿಳೆಯರ ಆರ್ಥಿಕತೆ ಪರಿಹರಿಸಲು ಮತ್ತು ಮಹಿಳೆಯರಿಗೆ ಸಹಾಯವಾಗಲು ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ, ಈ ಒಂದು ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣ ನೀಡುವುದರಿಂದ ಅವರಿಗೆ ಸಹಾಯ ಮಾಡುತ್ತಿದೆ. ಇದುವರೆಗೂ ಜೂನ್ ತಿಂಗಳವರೆಗೆ ಹಣ ಖಾತೆಗೆ ಹಾಕಲಾಗಿದೆ. ಜುಲೈ ಮತ್ತು ಆಗಸ್ಟ್ ತಿಂಗಳ ಹಣವನ್ನು ಈ ದಿನದಂದು ಖಾತೆಗೆ ಹಾಕಲಾಗುತ್ತದೆ, ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ ಇದರ ಸಂಪೂರ್ಣ ಮಾಹಿತಿ ಕೆಳಗಡೆ ನೀಡಲಾಗಿದೆ ಆದ್ದರಿಂದ ಸಂಪೂರ್ಣ ಓದಿ.
ಜುಲೈ ಮತ್ತು ಆಗಸ್ಟ್ ತಿಂಗಳ ಹಣ ಈ ದಿನದಂದು ಬಿಡುಗಡೆ:
ಗೃಹಲಕ್ಷ್ಮಿ ಯೋಜನೆ ಜುಲೈ ಮತ್ತು ಆಗಸ್ಟ್ ತಿಂಗಳ ಹಣ ಶೀಘ್ರದಲ್ಲಿ ಮನೆ ಯಜಮಾನಿಗೆ ಜಮಾ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ಸ್ಪಷ್ಟನೆ:
ಸೋಮವಾರದಂದು ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇದುವರೆಗೆ 11 ತಿಂಗಳ ಹಣ ಬಿಡುಗಡೆ ಆಗಿದ್ದು. ಜುಲೈ ಮತ್ತು ಆಗಸ್ಟ್ ತಿಂಗಳ ಹಣ ಇನ್ನು ಶೀಘ್ರದಲ್ಲಿ ಬಿಡುಗಡೆ ಆಗಲಿದೆ, ಕೆಲವಷ್ಟು ತಾಂತ್ರಿಕ ದೋಷಗಳಿಂದಾಗಿ ಒಟ್ಟಿಗೆ ಹಣ ಜಮಾ ಆಗಲು ತೊಂದರೆ ಆಗಿದೆ. ಒಂದು ವರ್ಷದಲ್ಲಿ 25000 ಕೋಟಿ ಹಣವನ್ನು ಯೋಜನೆಗೆ ನೀಡಲಾಗಿದೆ ಎಂದು ಮಾಹಿತಿಯನ್ನು ಸಹ ನೀಡಿದ್ದಾರೆ.