Gruhalakshmi Payment: ಗೃಹಲಕ್ಷ್ಮಿ 12ನೇ ಕಂತು ಈ ದಿನದಂದು ಜಮಾ.! ಮೊದಲು ಈ ಜಿಲ್ಲೆಯ ಮಹಿಳೆಯರಿಗೆ ಮಾತ್ರ ಹಣ, ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ!
Gruhalakshmi Yojana Payment: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಗೃಹಲಕ್ಷ್ಮಿ ಯೋಜನೆ ಕರ್ನಾಟಕ ರಾಜ್ಯದ ಬಡ ಕುಟುಂಬದ ಮಹಿಳೆಯರಿಗೆ ಮತ್ತು ತಮ್ಮ ಆರ್ಥಿಕತೆಗೆ ಸಹಾಯವಾಗಲು ಈ ಒಂದು ಯೋಜನೆಯನ್ನು ಜಾರಿಗೆ ತಂದು ಪ್ರತಿ ತಿಂಗಳು 2000 ಹಣವನ್ನು ಮನೆಯ ಕುಟುಂಬದ ಯಜಮಾನಿಗೆ ನೀಡಲಾಗುತ್ತದೆ. ಬಿಪಿಎಲ್ ರೇಷನ್ ಕಾರ್ಡ್ ಮತ್ತು ಎಪಿಎಲ್ ರೇಷನ್ ಕಾರ್ಡ್ ಕುಟುಂಬದ ಯಜಮಾನಗೆ ಈ ಒಂದು ಹಣ ಮಾತ್ರ ಸೀಮಿತವಾಗಿರುತ್ತದೆ. ಅದೇ ರೀತಿಯಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಫಲಾನುಭವಿಗಳಿಗೆ 12ನೇ ಕಂತಿನ ಹಣ ಮೇಲೆ ದೊಡ್ಡ ಸಿಹಿ ಸುದ್ದಿಯನ್ನು ನೀಡಿದ್ದಾರೆ ಇದರ ಸಂಪೂರ್ಣ ಮಾಹಿತಿ ಕೆಳಗಡೆ ನೀಡಲಾಗಿದೆ ಆದ್ದರಿಂದ ಸಂಪೂರ್ಣವಾಗಿ ಓದಿ.
ಗೃಹಲಕ್ಷ್ಮಿ 12ನೇ ಕಂತಿನ ಹಣ ಯಾವಾಗ ಜಮಾ:
ಗೃಹಲಕ್ಷ್ಮಿ ಯೋಜನೆಯ 12ನೇ ಕಂತಿನ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆಯನ್ನು ನುಡಿದಿದ್ದಾರೆ. ಅದೇ ರೀತಿಯಾಗಿ ಮೊದಲನೇ ಹಂತದಲ್ಲಿ ಈ ಜಿಲ್ಲೆಗಳಿಗೆ 12ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಜಿಲ್ಲೆಗಳು ಕೆಳಗಿನಂತಿವೆ:
- ಬಾಗಲಕೋಟೆ
- ಬೆಳಗಾವಿ
- ಯಾದಗಿರಿ
- ಬೆಂಗಳೂರು ಗ್ರಾಮಾಂತರ
- ಬೆಂಗಳೂರು
- ಶಿವಮೊಗ್ಗ
- ಚಿತ್ರದುರ್ಗ
- ಹಾವೇರಿ
- ವಿಜಯನಗರ
- ಕೊಪ್ಪಳ
- ಮೈಸೂರು
ಮೇಲ್ಗಡೆ ನೀಡಿರುವ ಜಿಲ್ಲೆಗಳಿಗೆ ಮೊದಲನೇ ಹಂತದಲ್ಲಿ 12ನೇ ಕಂತಿನ ಹಣವನ್ನು ನೇರವಾಗಿ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಲಕ್ಷ್ಮಿ ಹಬ್ಬಳ್ಕರ್ ಅವರು ಹೇಳಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ಘೋಷಣೆ:
ಸೋಮವಾರದಂದು ಚಿತ್ರದುರ್ಗ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇದುವರೆಗೂ ಮಹಿಳೆಯರ ಖಾತೆಗೆ 11 ಕಂತುಗಳನ್ನು ಬಿಡುಗಡೆ ಮಾಡಲಾಗಿದೆ, ಇನ್ನು ಶೀಘ್ರದಲ್ಲಿ ಗೃಹಲಕ್ಷ್ಮಿ ಯೋಜನೆ 12ನೇ ಕಂತಿನ ಹಣವನ್ನು ಬಿಡುಗಡೆ ಆಗಲಿದೆ, ಕೆಲವಷ್ಟು ತಾಂತ್ರಿಕ ದೋಷದಿಂದಾಗಿ ಗೃಹಲಕ್ಷ್ಮಿ 12ನೇ ಕಂತಿನ ಹಣ ವರ್ಗಾವಣೆ ಆಗಲು ಸಮಸ್ಯೆ ಆಗಿದೆ. ಅದೇ ರೀತಿಯಾಗಿ ಒಂದು ವರ್ಷದಲ್ಲಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರ ಖಾತೆಗೆ 25,000 ಕೋಟಿ ಹಣವನ್ನು ಒಟ್ಟಿಗೆ ಬಿಡುಗಡೆ ಮಾಡಲಾಗಿದೆ ಎಂದು ಸಹ ಹೇಳಿದ್ದಾರೆ.