Gruhalakshmi Yojana: ಗೃಹಲಕ್ಷ್ಮಿ 12 ಮತ್ತು 13ನೇ ಕಂತಿನ ಹಣ ಬಿಡುಗಡೆ.! ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗುಡ್ ನ್ಯೂಸ್!
Gruhalakshmi Scheme: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಮಹಿಳೆಯರಿಗೆ ಪ್ರತಿ ತಿಂಗಳು ತಮ್ಮ ಆರ್ಥಿಕತೆ ಮತ್ತು ತಮ್ಮ ಅನುಕೂಲಗಳಿಗಾಗಿ ಪ್ರತಿ ತಿಂಗಳು 2000 ಹಣ ನೀಡುವ ಗೃಹಲಕ್ಷ್ಮಿ ಯೋಜನೆ ಇದಾಗಿದೆ. ರಾಜ್ಯದಲ್ಲಿ ಈಗ ಸಾಕಷ್ಟು ಮಹಿಳೆಯರು ಈ ಒಂದು ಹಣದಿಂದ ಮಹಿಳೆಯರು ಮನೆಗಳಿಗೆ ಅನುಕೂಲ ವಸ್ತುಗಳನ್ನು ಖರೀದಿಸಲು ಮತ್ತು ಇನ್ನಿತರ ಅನುಕೂಲಗಳಿಗೆ ಬಹಳಷ್ಟು ಸಹಾಯಕವಾಗಿದೆ, ಈ ಒಂದು ಯೋಜನೆ ಲಾಭದಿಂದ ಮಹಿಳೆಯರು ತಮ್ಮ ಸಂತೋಷವನ್ನು ಸಹ ವ್ಯಕ್ತಪಡಿಸಿದ್ದಾರೆ.
ಆದರೆ ಸಾಕಷ್ಟು ಮಹಿಳೆಯರು ಎರಡು ತಿಂಗಳಿನಿಂದ ಯಾವುದೇ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲವೆಂದು ಬೇಸರಪಟ್ಟು ಆತಂಕಕ್ಕೆ ಈಡಾಗಿದ್ದಾರೆ. ಇನ್ನು ಮುಂದೆ ನಮಗೆ ಹಣ ಬರುವುದಿಲ್ಲ ಎಂದು ಸಾಕಷ್ಟು ಮಹಿಳೆಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ದೂರನ್ನು ನೀಡಿದ್ದಾರೆ. ಈ ಒಂದು ಗೃಹಲಕ್ಷ್ಮಿ ಹಣ ಬರದೆ ಇರುವ ಕಾರಣದಿಂದ ಬೇಸತ್ತ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ.
ಈ ಒಂದು ಮಾಹಿತಿ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಆದ ಲಕ್ಷ್ಮಿ ಹೆಬ್ಬಾಳ್ಕರ್ ಅವರು 12 ಮತ್ತು 13ನೇ ಕಂತಿನ ಹಣದ ಬಗ್ಗೆ ಸಿಎಂ ಸಿದ್ದರಾಮಯ್ಯನವರ ಜೊತೆಗೆ ವಿಚಾರಣೆ ಮಾಡಿದ್ದಾರೆ. ಇದೇ ತಿಂಗಳಿನ ಮುಂದಿನ ವಾರದಲ್ಲಿ ಈ ಎರಡು ಕಂತಿನ ಹಣ ಮಹಿಳೆಯರ ಖಾತೆಗೆ ಬಂದು ತಲುಪಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ರಾಜ್ಯದ ಮಹಿಳೆಯರಿಗೆ ತಿಳಿಸಿದ್ದಾರೆ.
ಗೃಹಲಕ್ಷ್ಮಿ 11ನೇ ಕಂತಿನ ಹಣ ಪರಿಶಿಷ್ಟ ಜಾತಿ ಮಹಿಳೆಯರ ಖಾತೆಗೆ ಪೋರ್ಟಲ್ ನಲ್ಲಿ ಸ್ವಲ್ಪ ತಾಂತ್ರಿಕ ದೋಷದಿಂದ ಸಮಸ್ಯೆ ಆಗಿದ್ದು ಆ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ 11ನೇ ಕಂತಿನ ಹಣ ಜಮಾ ಆಗಿಲ್ಲ. ಆ ಸಮಸ್ಯೆ ಪರಿಹಾರ ಮಾಡಿ ಹಣ ಜಮಾ ಮಾಡಲಾಗಿದೆ ಎಂದು ಸಚಿವೆ ಅವರು ಸಹ ಹೇಳಿದ್ದಾರೆ. ಸದ್ಯದಲ್ಲೇ ಗೃಹಲಕ್ಷ್ಮಿ 12 ಮತ್ತು 13ನೇ ಕಂತಿನ ಹಣ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಜಮಾ ಆಗಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಯಾರು ಯಾರು ನೋಂದಣಿ ಆಗಿದ್ದಾರೆ ಅವರಿಗೆ ಹಣ ಜಮಾ ಮಾಡಲಾಗುತ್ತದೆ ಎಂದು ಹೇಳಿದ್ದಾರೆ ಮತ್ತು ಯಾವ ಮಹಿಳೆಯರು ಸಹ ಆತಂಕ ಪಡಬೇಡಿ ಎಂದು ಸಹ ಹೇಳಿದ್ದಾರೆ. ಕೆಲವಷ್ಟು ತಾಂತ್ರಿಕ ದೋಷಗಳಿಂದ ಹಣ ಜಮಾ ಮಾಡಲು ಸಾಧ್ಯವಾಗಿಲ್ಲ ಇನ್ನು ಕೆಲವೇ 5 ರಿಂದ 10 ದಿನಗಳ ಒಳಗಾಗಿ ಎಲ್ಲ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಬಂದು ಜಮಾ ಆಗುತ್ತದೆ ಎಂದು ಮಾಹಿತಿಯನ್ನು ನೀಡಿದ್ದಾರೆ.