Gruhalakshmi Scheme: ₹2000 ಗೃಹಲಕ್ಷ್ಮಿ ಪೆಂಡಿಂಗ್ ಹಣ ಇಂದು ಜಮಾ.! ಈ ಜಿಲ್ಲೆಯ ಮಹಿಳೆಯರು ಖಾತೆಯನ್ನು ಹೀಗೆ ಚೆಕ್ ಮಾಡಿ!
Gruhalakshmi Scheme 2024: ನಮಸ್ಕಾರ ಎಲ್ಲ ಕನ್ನಡ ಸಮಸ್ತ ಜನತೆಗೆ, ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳು 2000 ಹಣ ನೀಡುವ ಈ ಒಂದು ಯೋಜನೆ ಆಗಿದೆ. ಈ ತಿಂಗಳ ಒಳಗಾಗಿ ಪೆಂಡಿಂಗ್ ಇರುವ ಹಣ ಒಟ್ಟಿಗೆ ಎಲ್ಲಾ ಮಹಿಳೆಯರ ಖಾತೆಗೆ ಜಮಾ ಆಗಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿಯನ್ನು ತಿಳಿಸಿದ್ದಾರೆ, ಈ ಒಂದು ಮಾಹಿತಿ ಸಂಪೂರ್ಣವಾದ ವಿವರಣೆಯನ್ನು ಕೆಳಗಡೆ ನೀಡಲಾಗಿದೆ ಆದ್ದರಿಂದ ಸಂಪೂರ್ಣವಾಗಿ ಓದಿ.
ಗೃಹಲಕ್ಷ್ಮಿ ಯೋಜನೆ 2000 ಹಣ ಜಮಾ:
ಈಗಾಗಲೇ ಕೆಲವಷ್ಟು ಜಿಲ್ಲೆಗಳ ಮಹಿಳೆಯರ ಖಾತೆಗೆ ಇದೇ ತಿಂಗಳು ಗೃಹಲಕ್ಷ್ಮಿ 2000 ಜಮಾ ಆಗಿರುವ ಸಂಪೂರ್ಣ ಸ್ಟೇಟಸ್ ಅನ್ನು ಕೆಳಗಡೆ ನೀವು ನೋಡಬಹುದು.
ನಿಮ್ಮ ಖಾತೆಗೆ ಹಣ ಬಂದಿದ್ಯೋ ಅಥವಾ ಬಂದಿಲ್ಲ ಎಂದು ಚೆಕ್ ಮಾಡಿಕೊಳ್ಳಲು, ನಿಮ್ಮ ಬ್ಯಾಂಕಿಗೆ ನೇರವಾಗಿ ಭೇಟಿ ನೀಡುವ ಮೂಲಕ ಹಣ ಚಕ್ ಮಾಡಬಹುದು ಅಥವಾ ಅಥವಾ ನಿಮ್ಮ ಮೊಬೈಲ್ ನಲ್ಲಿ ಡಿಬಿಟಿ ಆಪ್ಲಿಕೇಶನ್ ಮುಖಾಂತರ ನಿಮಗೆ ಎಲ್ಲಾ ಯೋಜನೆಗಳಿಂದ ಹಣ ಬಂದಿರುವ ಮಾಹಿತಿ ಅಲ್ಲಿ ಪಡೆಯಬಹುದಾಗಿದೆ.
ಈಗಾಗಲೇ ಗೃಹಲಕ್ಷ್ಮಿ ಯೋಜನೆ ಜುಲೈ ತಿಂಗಳ ಹಣ 26.65 ಲಕ್ಷ ಮಹಿಳೆಯರ ಖಾತೆಗೆ ಜಮಾ ಆಗಿದೆ, ಮೊದಲನೇ ಹಂತದಲ್ಲಿ ಬಾಗಲಕೋಟೆ, ಬೆಳಗಾವಿ, ಬೀದರ್ ಕಲ್ಬುರ್ಗಿ, ಬಳ್ಳಾರಿ, ವಿಜಯಪುರ, ಹಾವೇರಿ, ಗದಗ್, ಯಾದಗಿರಿ, ಕೊಪ್ಪಳ, ಕೋಲಾರ, ಬೆಂಗಳೂರು, ಚಿತ್ರದುರ್ಗ ಇಲ್ಲಿ ನೀಡಿರುವ ಜಿಲ್ಲೆಗಳಿಗೆ ಗೃಹಲಕ್ಷ್ಮಿ ಹಣ ಜಮಾ ಆಗುವ ವ್ಯವಸ್ಥೆ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿಯನ್ನು ನೀಡಿದ್ದಾರೆ ಕೆಲವಷ್ಟು ತಾಂತ್ರಿಕ ದೋಷದಿಂದ ಗೃಹಲಕ್ಷ್ಮಿ 11 ಮತ್ತು 12ನೇ ಕಂತಿರ ಹಣ ಅಂದರೆ ಒಟ್ಟಿಗೆ 4000 ಹಣ ಆಗಲು ಸ್ವಲ್ಪ ತೊಂದರೆ ಆಗಿದೆ ಇನ್ನು ಮುಂದೆ ಆ ತೊಂದರೆಯೂ ಸರಿಯಾಗಿದೆ. ಇಂದಿನಿಂದ ಎಲ್ಲ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ 4000 ಹಣ ಹಾಕುವ ವ್ಯವಸ್ಥೆ ನಡೆಯುತ್ತಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿಯನ್ನು ನೀಡಿ ಯಾರು ಆತಂಕ ಪಡಬೇಡಿ ಎಂದು ತಿಳಿಸಿದ್ದಾರೆ.