Gruhalakshmi Scheme: ಗೃಹಲಕ್ಷ್ಮಿ ಮಹಿಳೆಯರಿಗೆ ಸಿಹಿ ಸುದ್ದಿ.! ಒಟ್ಟಿಗೆ ₹4,000 ಹಣ ಖಾತೆಗೆ ಬಂದೇ ಬಿಡ್ತು ನೋಡಿ!
Gruhalakshmi Scheme: ನಮಸ್ಕಾರ ಎಲ್ಲ ಕನ್ನಡದ ಜನತೆಗೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೆಲವಷ್ಟು ಯೋಜನೆಗಳನ್ನು ಜಾರಿಗೆ ತರಲಾಯಿತು, ಅದರಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯು ಈ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಮಹಿಳೆಯರಿಗೆ ₹2000 ಹಣ ಕೊಡುವ ಒಂದು ಯೋಜನೆ ಆಗಿದೆ.
ಇದೀಗ ಗೃಹಲಕ್ಷ್ಮಿ ಹಣಕ್ಕಾಗಿ ಕಾಯುತ್ತಿರುವ ಮಹಿಳೆಯರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಅನ್ನು ನೀಡಿದೆ. ಈ ದಿನದಂದು ನಿಮ್ಮ ಖಾತೆಗೆ ಒಟ್ಟಿಗೆ 4000 ಹಣ ಆಗುತ್ತದೆ ಎಂದು ಸಿಎಂ ಸಿದ್ದರಾಮಯ್ಯನವರು ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ನೀಡಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ ಆದ್ದರಿಂದ ಸಂಪೂರ್ಣವಾಗಿ ಓದಿ.
ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ.!
ಕಳೆದ ಎರಡು ತಿಂಗಳಿನಿಂದ ಅಂದರೆ ಹಿಂದಿನ ಎರಡು ತಿಂಗಳಿನಿಂದ ಗೃಹಲಕ್ಷ್ಮಿ ಮಹಿಳೆಯರಿಗೆ ಯಾವುದೇ ಕಂತಿನ ಹಣ ಬಂದು ತಲುಪಿಲ್ಲ, ಹೀಗಾಗಿ ಈ ಒಂದು ಹಣಕ್ಕೆ ಮಹಿಳೆಯರು ಸಾಕಷ್ಟು ಕಾಯ್ತಾ ಇದ್ದಾರೆ, ಜೂನ್ ಮತ್ತು ಜುಲೈ ತಿಂಗಳ ಗೃಹಲಕ್ಷ್ಮಿ ಹಣ ಯಾವುದೋ ತಾಂತ್ರಿಕ ದೋಷದಿಂದ ಬಿಡುಗಡೆ ಆಗಿಲ್ಲ ಆದ್ದರಿಂದ ಇವಾಗ ತಾಂತ್ರಿಕ ದೋಷವು ಬಗೆ ಹರಿದಿದೆ. ಜುಲೈ ಮತ್ತು ಜೂನ್ ತಿಂಗಳ ಹಣ ಇನ್ನೂ ಎರಡು-ಮೂರು ದಿನಗಳ ಒಳಗಾಗಿ ಮಹಿಳೆಯರ ಖಾತೆಗೆ ಸೇರಲೇ ಎಂದು ಮಾಹಿತಿ ಸಿಕ್ಕಿದೆ.
ಈಗಾಗಲೇ ಮಹಿಳೆಯರ ಖಾತೆಗೆ ಜೂನ್ ಮತ್ತು ಜುಲೈ ತಿಂಗಳ ಗೃಹಲಕ್ಷ್ಮಿ ಹಣ ಇಂದು ಅಥವಾ ನಾಳೆ ಜಮಾ ಆಗಲಿದೆ, ಮೊದಲನೇ ಹಂತದಲ್ಲಿ 26.65 ಲಕ್ಷ ಗೃಹಲಕ್ಷ್ಮಿ ಮಹಿಳೆಯರಿಗೆ ತಲಾ ₹4,000 ಹಣ ಬಿಡುಗಡೆ ಆಗಲಿದೆ. ಇನ್ನುಳಿದ ಮಹಿಳೆಯರಿಗೆ ಆಗಸ್ಟ್ 10 ಒಳಗಾಗಿ ನೇರವಾಗಿ 4000 ಹಣ ಬಂದು ಖಾತೆಯ ಜಮಾ ಆಗಲಿದೆ, ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಮತ್ತು ಸಿಎಂ ಸಿದ್ದರಾಮಯ್ಯನವರು ಮೂಲ ಮಾಹಿತಿಯನ್ನು ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಹಣ ಚೆಕ್ ಮಾಡುವುದು ಹೇಗೆ?
ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ DBT ಅಪ್ಲಿಕೇಶನ್ ನವೀಕರಿಸಿ ಸಂಪೂರ್ಣವಾಗಿ ಅದರಲ್ಲಿ ನಿಮ್ಮ ಕೇಳಿರುವ ವಿವರಣೆಯನ್ನು ನೀಡಿ ನಂತರದಲ್ಲಿ ಪಾವತಿ ಸ್ಥಿತಿ ಆಯ್ಕೆ ಮಾಡಿಕೊಂಡು ನಂತರದಲ್ಲಿ ನಿಮಗೆ ಯಾವ ಯೋಜನೆಯಿಂದ ಎಷ್ಟು ಹಣ ಬಂದು ತಲುಪಿದೆ ಎಂಬುದರ ಮಾಹಿತಿ ಪಡೆಯಬಹುದು.