Gruhalakshmi Scheme: ಗೃಹಲಕ್ಷ್ಮಿ 12 ಮತ್ತು 13ನೇ ಕಂತಿನ ಹಣ ಜಮಾ.! ಮೊಬೈಲ್ ನಲ್ಲಿ ಹೀಗೆ ಹಣ ಚೆಕ್ ಮಾಡಿ!
Gruhalakshmi Yojana Payment: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಗಣೇಶ ಹಬ್ಬಕ್ಕೆ ಎಲ್ಲಾ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಲಕ್ಷ್ಮಿ ಹೆಬ್ಬಾಳಕರ ಕಡೆಯಿಂದ ಬಂಪರ್ ಗುಡ್ ನ್ಯೂಸ್ ನೀಡಿದ್ದಾರೆ. ಏನು ಎಂದರೆ 12ನೇ ಕಂತು ಮತ್ತು 13ನೇ ಕಂತು ಬಿಡುಗಡೆ ಮಾಡುವುದರ ಬಗ್ಗೆ ಭರ್ಜರಿ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ ಇದರ ಸಂಪೂರ್ಣ ಮಾಹಿತಿ ಕೆಳಗಡೆ ನೀಡಲಾಗಿದೆ ಆದ್ದರಿಂದ ಸಂಪೂರ್ಣ ಓದಿ.
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ತನ್ನ ಅಧಿಕಾರಕ್ಕೆ ಬಂದ ನಂತರ ಮಹಿಳೆಯರ ಸಬಲೀಕರಣ ಮತ್ತು ಆರ್ಥಿಕತೆಯ ಸಹಾಯಕ್ಕಾಗಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಯಿತು, ಈ ಒಂದು ಯೋಜನೆ ಅಡಿಯಲ್ಲಿ ಮಹಿಳೆಯರ ಖಾತೆಯ ಪ್ರತಿ ತಿಂಗಳು 2000 ಸಂದಾಯ ಮಾಡಲಾಗುತ್ತದೆ.
ಗೃಹಲಕ್ಷ್ಮಿ ಯೋಜನೆ 12 ಮತ್ತು 13ನೇ ಕಂತು ಬಿಡುಗಡೆ:
ಸೋಮವಾರ ದಿನದಂದು ಚಿತ್ರದುರ್ಗದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದಾಗ ಇಲ್ಲಿಯವರೆಗೆ ಎಲ್ಲ ಮಹಿಳೆಯರ ಖಾತೆ ಗೃಹಲಕ್ಷ್ಮಿ 11ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ. 12 ಮತ್ತು 13ನೇ ಕಂತಿನ ಹಣ ಕೆಲವಷ್ಟು ತಾಂತ್ರಿಕ ದೋಷದಿಂದ ಜಮಾ ಆಗಿಲ್ಲ, ಆದ್ದರಿಂದ ಸಾಕಷ್ಟು ಮಹಿಳೆಯರಿಗೆ ಆತಂಕ ಉಂಟಾಗಿದೆ ಇನ್ನು ಮುಂದೆ ಎಲ್ಲ ಮಹಿಳೆಯರು ಅಂತಕ್ಕವನ್ನು ಬಿಡಿ ಯಾಕೆ ಅಂದರೆ ಗೃಹಲಕ್ಷ್ಮಿ 12 ಮತ್ತು 13ನೇ ಕಂತಿನ ಹಣ ಇನ್ನು ನಾಲ್ಕೈದು ದಿನಗಳಲ್ಲಿ ನಿಮ್ಮ ಖಾತೆಗೆ ಬಂದು ಜಮಾ ಆಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಭರವಸೆಯನ್ನು ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಹಣ ಚೆಕ್ ಮಾಡುವುದು ಹೇಗೆ:
ನೀವು ಗೃಹಲಕ್ಷ್ಮಿ ಯೋಜನೆ ಹಣವನ್ನು ಎರಡು ಹಂತದಲ್ಲಿ ಚೆಕ್ ಮಾಡಬಹುದಾಗಿದೆ ಮೊದಲನೇ ಹಂತ ನಿಮ್ಮ ಬ್ಯಾಂಕ್ ಗೆ ಭೇಟಿ ನೀಡುವ ಮೂಲಕ ನಿಮ್ಮ ಹಣವನ್ನು ಪರಿಶೀಲನೆ ಮಾಡಬಹುದಾಗಿದೆ. ಮತ್ತು ಎರಡನೇ ಹಂತ ನಿಮ್ಮ ಮೊಬೈಲ್ ನಲ್ಲಿ ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ಮುಖಾಂತರ ನಿಮ್ಮ ಖಾತೆಗೆ ಎಷ್ಟು ಹಣ ಬಂದು ಜಮಾ ಆಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ.