Shed Subsidy: ಕುರಿ, ದನ, ಕೋಳಿ ಶೆಡ್ ನಿರ್ಮಾಣಕ್ಕೆ ₹57000 ಸಹಾಯಧನ.! ಕೂಡಲೇ ಹೀಗೆ ಅರ್ಜಿ ಸಲ್ಲಿಸಿ, ಪಡೆದುಕೊಳ್ಳಿ!
Januvaru Shed Subsidy: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ರೈತರಿಗೆ ಕೃಷಿ ಜೊತೆಗೆ ಆರ್ಥಿಕವಾಗಿ ನೆರವು ನೀಡಲು ಕುರಿ, ದನ, ಕೋಳಿ ಶೆಡ್ ನಿರ್ಮಾಣಕ್ಕೆ 57000 ಸಹಾಯಧನ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಇಂದಿನ ದಿನಮಾನಗಳಲ್ಲಿ ರೈತರು ಕೃಷಿಯಲ್ಲಿ ಸಾಕಷ್ಟು ನಷ್ಟಕ್ಕೆ ಒಳಗಾಗುತ್ತಿದ್ದಾರೆ ಅಂದರೆ ಇತ್ತೀಚಿನ ಹವಾಮಾನ ಸಾಕಷ್ಟು ಸರಿ ಇಲ್ಲ, ಇಂಥ ಒಂದು ಸನ್ನಿವೇಶದಲ್ಲಿ ರೈತರಿಗೆ ಕೃಷಿ ಜೊತೆಗೆ ಆರ್ಥಿಕವಾಗಿ ಸದೃಢರಾಗಲು ಕುರಿ, ಕೋಳಿ, ದನ ಮತ್ತು ಹಂದಿ ಸಾಕಾಣಿಕೆ ಸಹ ಮಾಡಬಹುದು.
ಕುರಿ, ಕೋಳಿ, ದನ ಮತ್ತು ಹಂದಿ ಸಾಕಾಣಿಕೆ ಮಾಡಲು ರೈತರಿಗೆ ಆರ್ಥಿಕವಾಗಿ ನೆರವು ನೀಡಲು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಶಡ್ ನಿರ್ಮಾಣ ಮಾಡುವ ಜಾಗದ ಅಳತೆ 18 ಅಡಿ ಉದ್ದ ಗೋಡೆ, 10 ಅಡಿ ಅಗಲ, 5 ಅಡಿ ಎತ್ತರದ ಮೇವು ತೊಟ್ಟಿ ನಿರ್ಮಾಣಕ್ಕೆ 57,000 ಸಹಾಯಧನವನ್ನು ನೀಡಲಾಗುತ್ತದೆ. ಇದರ ಹಣದಲ್ಲಿ 10,556 ರೂಪಾಯಿ ಕೂಲಿ ವೆಚ್ಚ 46,444 ರೂಪಾಯಿ ಎಲ್ಲ ಸಾಮಗ್ರಿಗಳ ವೆಚ್ಚವನ್ನು ಒಳಗೊಂಡಿರುತ್ತದೆ.
ಈ ಒಂದು ಯೋಜನೆ ಅಡಿಯಲ್ಲಿ ಕುರಿ ಮತ್ತು ಕೋಳಿ, ದನ, ಹಂದಿ ಸಾಕಾಣಿಕೆ ಮಾಡಲು ಆಸಕ್ತಿ ಇರುವ ರೈತರು ತಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡುವ ಮೂಲಕ ಕೆಳಗಡೆ ನೀಡಿರುವ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಉದ್ಯೋಗ ಖಾತ್ರಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಜಾನುವಾರಗಳನ್ನು ಸಾಕಾಣಿಕೆ ಮಾಡಿರುವ
- ದೃಢೀಕರಣ ಪತ್ರ.
- ಜಾಬ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ಸಂಖ್ಯೆ
ಉದ್ಯೋಗ ಖಾತ್ರಿ ಯೋಜನೆ ಅರ್ಹತೆಗಳು:
- BPL ಕಾರ್ಡ್ ಹೊಂದಿರುವ ರೈತರು.
- ಸಣ್ಣ ಸಣ್ಣ ರೈತರು ಅರ್ಜಿಯನ್ನು ಸಲ್ಲಿಸಬಹುದು.
- ಗ್ರಾಮೀಣ ಭಾಗಗಳಲ್ಲಿ ವಾಸಿಸುವ ರೈತರು.
- ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ರೈತರು ಅರ್ಜಿ ಸಲ್ಲಿಸಬಹುದು.
- ಈ ಒಂದು ಯೋಜನೆ ಅಡಿಯಲ್ಲಿ ಸಹಾಯಧನ ಪಡೆಯಲು ಜಾಬ್ ಕಾರ್ಡ್ ಹೊಂದಿರಬೇಕು.
- ಅರ್ಜಿ ಸಲ್ಲಿಸುವ ರೈತರು ಕನಿಷ್ಠ 4 ಜಾನುವಾರುಗಳನ್ನು ಹೊಂದಿರಬೇಕು.
- ಪಶು ವೈದ್ಯಾಧಿಕಾರಿಗಳಿಂದ ಪಶು ದೃಢೀಕರಣ ಪತ್ರವನ್ನು ಹೊಂದಿರಬೇಕು.