BPL ರೇಷನ್ ಕಾರ್ಡ್ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್.! ಸರ್ಕಾರದಿಂದ ಮತ್ತೊಂದು ಹೊಸ ಸೌಲಭ್ಯ ಸಿಗಲಿದೆ!
BPL Ration Card: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಬಡತನ ರೇಖೆಗಿಂತ ಕೆಳಗಡೆ ಇರುವ ಜನರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಬಿಪಿಎಲ್ ರೇಷನ್ ಕಾರ್ಡ್ ನೀಡಿದೆ. ಈ ಒಂದು ಬಿಪಿಎಲ್ ರೇಷನ್ ಕಾರ್ಡ್ ನಿಂದ ರಾಜ್ಯದಲ್ಲಿನ ಅನ್ನಭಾಗ್ಯ ಯೋಜನೆ ಸಹ ಉಪಯೋಗ ಪಡೆಯಬಹುದಾಗಿದೆ ಮತ್ತು ಇದರ ಜೊತೆಗೆ ರೇಷನ್ ಕಾರ್ಡ್ ಹೊಂದಿದ ಜನರಿಗೆ ಉಚಿತ ಅಕ್ಕಿಯನ್ನು ಸರಕಾರ ಒದಗಿಸುತ್ತದೆ.
ರಾಜ್ಯ ಸರ್ಕಾರ ಈ ಹಿಂದೆ ಕೆಲವಷ್ಟು ಸುದ್ದಿಗಳ ಪ್ರಕಾರ ಉಚಿತ ಅಕ್ಕಿಯ ಬದಲಿಗೆ ಕೆಲವಷ್ಟು ಉಪಯುಕ್ತ ವಸ್ತುಗಳನ್ನು ಒದಗಿಸುತ್ತದೆ ಎಂದು ಸುದ್ದಿಯನ್ನು ನೀಡಿತ್ತು, ಈ ಒಂದು ಕಾರಣದಿಂದಾಗಿ ಅನ್ನಭಾಗ್ಯ ಯೋಜನೆಗೆ ಸಾಕಷ್ಟು ತೊಂದರೆಗಳು ಉಂಟಾಗಬಹುದು ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಉಚಿತ ಅಕ್ಕಿಯ ಬದಲಿಗೆ ಅಗತ್ಯ ವಸ್ತುಗಳನ್ನು ಕೊಡುವುದಲ್ಲ ಎಂದು ಮಾಹಿತಿ ನೀಡಿದೆ. ಒಂದು ಮಾಹಿತಿಯ ಕುರಿತು ಸಂಪೂರ್ಣ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ.
ಸಿಎಂ ಸಿದ್ದರಾಮಯ್ಯನವರ ಹೇಳಿಕೆ:
ಸರ್ಕಾರವು ಅನ್ನಭಾಗ್ಯ ಯೋಜನೆ ಪ್ರಾರಂಭ ವಾದಾಗ 5 ಕೆಜಿ ಅಕ್ಕಿ ಉಚಿತ ಮತ್ತು ಉಳಿದ 5 ಕೆಜಿ ಅಕ್ಕಿಯ ಬದಲಿಗೆ ರೂಪಾಯಿ 170 ಕೊಡುವುದಾಗಿ ಭರವಸೆಯನ್ನು ನೀಡಿತ್ತು, ಹಣ ವರ್ಗಾವಣೆ ಮಾಡುವ ಸಮಸ್ಯೆಯಿಂದಾಗಿ ಸಂಪುಟ ಸಭೆಯಲ್ಲಿ, 5 ಕಿಲೋ ಅಕ್ಕಿಯ ಬದಲಿಗೆ ಇತರ 9 ಅಗತ್ಯ ವಸ್ತುಗಳನ್ನು ನೀಡುವುದಾಗಿ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿತ್ತು, ಅಗತ್ಯ 9 ವಸ್ತುಗಳನ್ನು ನೀಡುವುದೋ ಅಥವಾ 5 ಕೆ.ಜಿ ಅಕ್ಕಿಯ ಬದಲಿಗೆ ರೂಪಾಯಿ 170 ನೀಡುವುದು ಸರಿಯೋ ಅಥವಾ ಇಲ್ಲವೆಂದು ಸಂಪುಟ ಸಭೆಯಲ್ಲಿ ವಿಚಾರಣೆ ಮಾಡಲಾಗಿದೆ.
ಅಗತ್ಯ 9 ವಸ್ತುಗಳನ್ನು ನೀಡುವುದು ಬೇಡ ಎಂದು ಸಾಕಷ್ಟು ಸಚಿವರು ಹೇಳಿದ್ದಾರೆ, ಈ ಒಂದು ಸಮಸ್ಯೆಯಿಂದಾಗಿ ಸಿಎಂ ಸಿದ್ದರಾಮಯ್ಯನವರು ಹಿಂದಿನ ವ್ಯವಸ್ಥೆಯಲ್ಲಿ 5 ಕೆಜಿ ಅಕ್ಕಿ ಬದಲಿಗೆ ಹಣವನ್ನು ನೀಡುವುದಾಗಿ ಸಭೆಯಲ್ಲಿ ಸಂಪೂರ್ಣವಾಗಿ ತಿಳಿಸಿದ್ದಾರೆ. ಇನ್ನು ಮುಂದೆ ರಾಜ್ಯದ ಜನತೆಗೆ ಉಚಿತವಾಗಿ 5 ಕೆಜಿ ಅಕ್ಕಿ ಮತ್ತು ಇನ್ನುಳಿದ 5 ಕೆಜಿ ಅಕ್ಕಿ ಬದಲಿಗೆ ಹಣವನ್ನು ನೀಡುವುದಾಗಿ ಹೇಳಿದ್ದಾರೆ.