Bhagyalakshmi Scheme: ಭಾಗ್ಯಲಕ್ಷ್ಮೀ ಬಾಂಡ್ ಫಲಾನುಭವಿಗಳಿಗೆ ಗುಡ್ ನ್ಯೂಸ್.! 2 ಲಕ್ಷ ಹಣ ಜಮಾ, ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದ ಸ್ಪಷ್ಟನೆ!

News

Bhagyalakshmi Scheme: ಭಾಗ್ಯಲಕ್ಷ್ಮೀ ಬಾಂಡ್ ಫಲಾನುಭವಿಗಳಿಗೆ ಗುಡ್ ನ್ಯೂಸ್.! 2 ಲಕ್ಷ ಹಣ ಜಮಾ, ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದ ಸ್ಪಷ್ಟನೆ!

Bhagyalakshmi Scheme: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಭಾಗ್ಯಲಕ್ಷ್ಮಿ ಯೋಜನೆ ಬಾಂಡ್ ಪಡೆದವರಿಗೆ ಸರಕಾರ ಸಿಹಿ ಸುದ್ದಿಯನ್ನು ನೀಡಿದೆ ಏನು ಎಂದರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಆಗ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಎರಡು ದಿನದಿಂದ ಭಾಗ್ಯಲಕ್ಷ್ಮಿ ಬಾಂಡ್ ಫಲಾನುಭವಿಗಳನ್ನು ಲೆಕ್ಕ ಮಾಡುತ್ತಿದ್ದಾರೆ. ಮೆಚ್ಯೂರಿಟಿ ಎಷ್ಟು ಜನ ಆಯ್ಕೆಯಾಗಿದ್ದಾರೆ ನೋಡಿ ಅಷ್ಟು ಜನರಿಗೆ ಹಣ ನೀಡುವುದಾಗಿ ಹೇಳಿದ್ದಾರೆ.

ಸೆಪ್ಟಂಬರ್ 9 ನೇ ತಾರೀಕಿನಂದು ಬೆಳಗಾವಿ ಜಿಲ್ಲೆಯಲ್ಲಿ ಭಾಗ್ಯಲಕ್ಷ್ಮಿ ಬಾಂಡ್ಗೆ ಮೆಚ್ಯೂರಿಟಿ ಆದವರ ಬಗ್ಗೆ ಲೆಕ್ಕ ಹಾಕುತ್ತಿದೆ, ಎಷ್ಟು ಜನ ಆಯ್ಕೆಯಾಗಿದ್ದಾರೆ ನೋಡಿ ಅವರಿಗೆ ಹಣ ಕೊಡುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿಯನ್ನು ನೀಡಿದ್ದಾರೆ. ನಗರಗಳಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಂಚೆ ಈ ಒಂದು ಯೋಜನೆಯ ಹೆಸರು ಭಾಗ್ಯಲಕ್ಷ್ಮಿ ಅಂತ ಅನೌನ್ಸ್ ಮಾಡಿದ್ದು, ಈಗ ಇದರ ಹೆಸರು ಬದಲಾಗಿ ಸುಕನ್ಯಾ ಸಮೃದ್ಧಿ ಯೋಜನೆ ಆಗಿದೆ, ಈ ಹಿಂದೆ ಎಲ್ ಐ ಸಿ ಅವರು ಕೂಡ ಬಾಂಡ್ ಅನ್ನು ಕೊಡುತ್ತಿದ್ದರು ಈಗ ಅಂಚೆ ಕಚೇರಿಯಿಂದ ಬಾಂಡನ್ನು ಕೊಡುತ್ತಿದ್ದಾರೆ ಎಂದು ಸಹ ಹೇಳಿದ್ದಾರೆ.

ನನ್ನ ಮಗು ಹುಟ್ಟಿದ ತಕ್ಷಣ ಇಂತಿಷ್ಟು ಅಂತ ಹಣವನ್ನು ನೀಡಲಾಗುತ್ತದೆ, ಭಾಗ್ಯಲಕ್ಷ್ಮಿ ಯೋಜನೆ ಹೆಸರು ಬದಲಾಗಿರಬಹುದು ಆದ್ರೆ ಯೋಜನೆ ಒಂದೇ ಆಗಿದೆ. 19 ವರ್ಷದ ಹೆಣ್ಣು ಮಗು ಓದಿಗಾಗಿ ಬೇಕಾದರೆ ಒಂದುವರೆ ಲಕ್ಷ ಕೊಡುತ್ತೇವೆ. ಹೆಣ್ಣು ಮಗುವಿಗೆ 21 ವರ್ಷಕ್ಕೆ ಬೇಕಾದರೆ 1,80000 ಹಣವನ್ನು ನೀಡಲಾಗುತ್ತದೆ, ಈಗ ಈ ಯೋಜನೆ ಅಡಿಯಲ್ಲಿ 2 ಲಕ್ಷ ಫಲಾನುಭವಿಗಳಿಗೆ ಹಣವನ್ನು ಕೊಡುವುದಾಗಿ ಹೇಳಿದ್ದಾರೆ. ಇಲಾಖೆಯಿಂದ ಶೀಘ್ರದಲ್ಲೇ ಬಾಂಡ್ ವಿತರಿಸಲಾಗುತ್ತದೆ ಎಂದು ಹೇಳಿದ್ದಾರೆ ಸರಕಾರವು ಬದಲಾಗಬಹುದು ಆದರೆ ಯೋಜನೆ ಹಾಗೆ ಉಳಿಯುತ್ತದೆ ಎಂದು ಭರವಸೆಯನ್ನು ಸಹ ನೀಡಿದ್ದಾರೆ.

ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯ ಇನ್ನಷ್ಟು ಅಪ್ಡೇಟ್ಗಳಿಗಾಗಿ ನಮ್ಮ ವೆಬ್ಸೈಟ್ ಅನ್ನು ಅನುಸರಿಸಿ.