Anna Bhagya Scheme: ಇನ್ಮುಂದೆ ಅನ್ನಭಾಗ್ಯ ಅಕ್ಕಿ ಹಣ ಬಂದ್.? ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ!
Anna Bhagya Scheme Payment: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವು 5 ಕೆಜಿ ಅಕ್ಕಿಯ ಹಣವನ್ನು ಇನ್ನು ಮುಂದೆ ಬಹುತೇಕವಾಗಿ ಬಂದ್ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಹಣದ ಬದಲು ಅಕ್ಕಿಯನ್ನೇ ನೀಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ. ಇದರ ಸಂಪೂರ್ಣ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ, ಆದ್ದರಿಂದ ಸಂಪೂರ್ಣವಾಗಿ ಓದಿ.
ಅನ್ನ ಭಾಗ್ಯ ಯೋಜನೆ ಅಕ್ಕಿಯ ಕುರಿತು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾದ ಕೆಎಚ್ ಮುನಿಯಪ್ಪನವರು ಕೇಂದ್ರ ಸರ್ಕಾರದ ಆಹಾರ ಮಂತ್ರಿಯ ಜೊತೆ ಮಂಗಳವಾರ ಮಾತನಾಡಿದ್ದಾರೆ. ಸಭೆಗಳಲ್ಲಿ ಅಕ್ಕಿಯನ್ನು ನೀಡುವುದಾಗಿ ಕೇಂದ್ರ ಸರ್ಕಾರವು ಒಪ್ಪಿಕೊಂಡಿದೆ. ಒಂದು ಮಾಹಿತಿ ಹಿನ್ನೆಲೆಯಾಗಿ ಅಕ್ಕಿ ಪೂರಿಗೆ ಆಗುತ್ತಿದ್ದಂತೆ ಫಲಾನುಭವಿಗಳ ಖಾತೆಗೆ ಹಣವನ್ನು ಹಾಕುವುದನ್ನು ನಿಲ್ಲಿಸಲಾಗುತ್ತದೆ.
ಹಣದ ಬದಲಿಗೆ ಅಕ್ಕಿಯನ್ನು ಕೊಡಲು ಕೇಂದ್ರ ಸರ್ಕಾರ ಒಪ್ಪಿಗೆ!
ಒಂದು ಮಾಹಿತಿ ಬಗ್ಗೆ ದೆಹಲಿಯಲ್ಲಿ ಮಾತನಾಡಿರುವ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾದ ಕೆಎಚ್ ಮುನಿಯಪ್ಪನವರು, ಅನ್ನಭಾಗ್ಯ ಯೋಜನೆಯ ಹಣದ ಕುರಿತು ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರವು ಅಕ್ಕಿಯನ್ನು ಮಾರಾಟ ಮಾಡಲು ಒಪ್ಪಿಕೊಂಡಿದೆ. ಮತ್ತು ಅಕ್ಕಿಯನ್ನು ನೀಡುತ್ತೇವೆ ಎಂದು ಸಚಿವರು ಹೇಳಿದ್ದಾರೆ, ಮಾಸಿಕವಾಗಿ 20 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬೇಕಾಗುತ್ತದೆ. ಕೇಂದ್ರ ಸರ್ಕಾರವು ಹಕ್ಕಿಯನ್ನು ನೀಡಲು ಪ್ರಾರಂಭಿಸಿದಾಗ ಫಲಾನುಭವಿಗಳಿಗೆ ಸಂಪೂರ್ಣವಾಗಿ 10 ಕೆಜಿ ಅಕ್ಕಿ ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರದಲ್ಲಿ 13 ಲಕ್ಷ ಬಿಪಿಎಲ್ ರೇಷನ್ ಕಾರ್ಡನ್ನು ಹೊಂದಿದ ಜನರು ಇದ್ದಾರೆ, ಅಂದರೆ ರಾಜ್ಯ ಸರ್ಕಾರವು 40 ರಿಂದ 50 ಲಕ್ಷ ಜನರಿಗೆ ಅಕ್ಕಿಯನ್ನು ಕೊಡುತ್ತಿದೆ. ಇದೀಗ ನಾವು ಕೇಂದ್ರ ಸ್ವಾಮ್ಯದ ಕೇಂದ್ರ ಭಂಡಾರ NCCF ಅವರ ಮುಖಾಂತರ ಅಕ್ಕಿಯನ್ನು ಖರೀದಿ ಮಾಡುದಿದ್ದೇವೆ. ಇದೀಗ ಕೇಂದ್ರ ಸರ್ಕಾರವು ಮುಂದೆ ಬಂದಿದೆ 28 ರೂಪಾಯಿ ಕೆಜಿಗೆ ಅಕ್ಕಿಯನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.
ಅನ್ನಭಾಗ್ಯ ಯೋಜನೆ ಅಕ್ಕಿಯ ಹಣದ ಬದಲು ಬರುತ್ತಿದ್ದ ಹಣ ಎಷ್ಟು?
ಐದು ಕೆಜಿ ಅಕ್ಕಿಯ ಬದಲಿಗೆ ಅದರ ಹಣವನ್ನು ಕರ್ನಾಟಕ ರಾಜ್ಯದ ಫಲಾನುಭವಿಗಳಿಗೆ ಸರಕಾರವು ನೀಡುತ್ತಿತ್ತು. ತಲಾ ಒಂದು ಕೆಜಿಗೆ 34 ಅಂತೆ 180 ರೂಪಾಯಿಗಳನ್ನು ರಾಜ್ಯದ ಜನರ ಖಾತೆಗೆ ನೀಡಲಾಗುತ್ತಿತ್ತು. ಒಂದು ಕುಟುಂಬದ ಯಜಮಾನಗೆ ಅನ್ನ ಭಾಗ್ಯ ಯೋಜನೆ ಅಕ್ಕಿ ಹಣವನ್ನು ನೀಡಲಾಗುತ್ತಿತ್ತು.
ಅನ್ನಭಾಗ್ಯ ಯೋಜನೆ ಅಕ್ಕಿ ಹಣ ಚೆಕ್ ಮಾಡುವುದು ಹೇಗೆ?
ಕರ್ನಾಟಕ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್ ಸೈಟ್ ಮೊದಲು ಭೇಟಿ ನೀಡಿ, ಕೆಳಗಡೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ: https://ahara.kar.nic.in/status1/status_of_dbt.aspx
ನಂತರ ವರ್ಷ, ತಿಂಗಳು, ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ. ನಂತರದಲ್ಲಿ ನಿಮ್ಮ ಖಾತೆಗೆ ಎಷ್ಟು ಹಣ ಜಮಾ ಆಗಿದೆ ಮತ್ತು ಯಾವ ದಿನಾಂಕಕ್ಕೆ ಜಮಾಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನೀವು ಇಲ್ಲಿ ಪಡೆಯಬಹುದಾಗಿರುತ್ತದೆ.