Ganga kalyana Scheme: ಉಚಿತ ಬೋರ್ವೆಲ್ ಕೊರೆಸಲು ಅರ್ಜಿ ಆಹ್ವಾನ.! ಈ ಯೋಜನೆಗೆ ಹೀಗೆ ಅರ್ಜಿ ಸಲ್ಲಿಸಿ!
Ganga Kalyana Scheme: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಈಗಾಗಲೇ ಉಚಿತ ಬೋರ್ವೆಲ್ ಕೊರೆಸಲು ವಿವಿಧ ವರ್ಗಗಳ ಮಾರ್ಗಗಳಿಂದ ಅರ್ಜಿಯನ್ನು ಆವರಿಸಲಾಗಿದ್ದು ಮತ್ತೊಮ್ಮೆ ಎಸ್ಸಿ, ಎಸ್ಟಿ ವರ್ಗದ ನಿಗಮದ ಮೂಲಕ ಆನ್ಲೈನ್ ನಲ್ಲಿ ಅರ್ಜಿಯನ್ನು ಕರೆಯಲಾಗಿದ್ದು. ರೈತರಿಗೆ ಆರ್ಥಿಕವಾಗಿ ತಮ್ಮ ಹೊಲಗಳಲ್ಲಿ ಬೇಸಾಯ ಮಾಡಲು ನೀರಾವರಿ ಅವಕಾಶಕ್ಕಾಗಿ ಈ ಒಂದು ಗಂಗಾ ಕಲ್ಯಾಣ ಯೋಜನೆಯನ್ನು ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತಂದಿದೆ ಮತ್ತು ಇದರ ಮೂಲಕ ರೈತರಿಗೆ ಆರ್ಥಿಕ ನೆರವನ್ನು ನೀಡುತ್ತದೆ.
ಇತ್ತೀಚಿಗೆ ಯಾವೆಲ್ಲಾ ವರ್ಗಗಳ ನಿಗಮದಿಂದ ಅಜ್ಜನ್ನು ಕರೆಯಲಾಗಿದೆ ಮತ್ತು ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕು ಮತ್ತು ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಎಂಬುದರ ಮಾಹಿತಿಯನ್ನು ಈ ಕೆಳಗಡೆ ನೀಡಲಾಗಿದೆ ಆದ್ದರಿಂದ ಕೊನೆಯ ತನಕ ಓದಿ.
ರಾಜ್ಯ ಸರ್ಕಾರದ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಲಿಂಗಾಯತ ಮತ್ತು ಒಕ್ಕಲಿಗ ಹಾಗೂ ಹಿಂದುಳಿದ ವರ್ಗದ, ದೇವರಾಜ್ ಅರಸು ನಿಗಮದ ವತಿಯಿಂದ ಈಗಾಗಲೇ ಅರ್ಜಿಯನ್ನು ಕರೆಯಲಾಗಿದೆ. ಮತ್ತು ಅರ್ಜಿ ದಿನಾಂಕ ಮುಗಿದಿದೆ, ಇದೀಗ ಮತ್ತೊಮ್ಮೆ ಎಸ್ಸಿ, ಎಸ್ಟಿ ವರ್ಗದ ನಿಗಮದಿಂದ ಗಂಗಾ ಕಲ್ಯಾಣ ಯೋಜನೆ, ಉಚಿತ ಬೋರ್ವೆಲ್ ಕೊರಿಸಲು ಅರ್ಜಿಯನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಂಬರ್ 10ರವರೆಗೆ ಇರುತ್ತದೆ.
ಗಂಗಾ ಕಲ್ಯಾಣ ಯೋಜನೆಯಲ್ಲಿ ಸಹಾಯಧನ ಎಷ್ಟರವರಿಗೆ ಸಿಗುತ್ತದೆ:
ವ್ಯಕ್ತಿಕ ಕೊಳವೆಬಾವಿ ಕೊರೆಸಲು ಒಟ್ಟು ಘಟಕದ ವೆಚ್ಚ ರೂಪಾಯಿ 4.75 ಲಕ್ಷ ಇದರಲ್ಲಿ ವಿದ್ಯುತ್ ಉಪಕರಣಗಳ ವೆಚ್ಚವನ್ನು ರೂಪಾಯಿ 75,000ವನ್ನು ಎಸ್ಕಾಂಗೆ ನೀಡಬೇಕಾಗುತ್ತದೆ. ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ ಶೇಕಡ 4ರ ಬಡ್ಡಿಯಲ್ಲಿ 50 ಸಾವಿರದವರೆಗೆ ಸಾಲವನ್ನು ನೀಡಲಾಗುತ್ತದೆ.
ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು:
- ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೇಲೆ ನೀಡಿರುವ ವರ್ಗದ ನಿಗಮಕ್ಕೆ ಸೇರಿರಬೇಕು.
- ಸಣ್ಣ ಮತ್ತು ಅತಿ ಸಣ್ಣ ರೈತರು ಈ ಒಂದು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- ಅರ್ಜಿದಾರ ಕುಟುಂಬದಲ್ಲಿ ಯಾವುದೇ ಸರಕಾರಿ ನೌಕರರು ಇರಬಾರದು.
ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಪಾಸ್ ಬುಕ್
- ಅರ್ಜಿದಾರರ ಫೋಟೋ
- ಜಮೀನಿನ ಪಹಣಿ ಪತ್ರ
- ಸಣ್ಣ ಹಿಡುವಳಿ ಪ್ರಮಾಣ ಪತ್ರ
- ರೇಷನ್ ಕಾರ್ಡ್
- ಕೊಳವೆಬಾವಿ ಇರದೇ ಇರುವ ದೃಢೀಕರಣ
- ಪ್ರಮಾಣ ಪತ್ರ
- ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ:
ರಾಜ್ಯದ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಮೇಲೆ ನೀಡಿರುವ ಅಗತ್ಯ ದಾಖಲೆಗಳೊಂದಿಗೆ ನಿಮ್ಮ ಹತ್ತಿರದ ಸೇವಾಕೇಂದ್ರ ಗಳಿಗೆ ಭೇಟಿ ನೀಡುವ ಮೂಲಕ ಈ ಒಂದು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.