Gruhalakshmi Yojana: ಗೃಹಲಕ್ಷ್ಮಿ ಒಟ್ಟಿಗೆ ₹4,000 ಹಣ ಜಮಾ.! ಮೊಬೈಲ್ ನಲ್ಲಿ ಹೀಗೆ ಹಣ ಚೆಕ್ ಮಾಡಿ!
Gruhalakshmi Scheme Payment: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ. ಅಂದರೆ ಗೃಹಲಕ್ಷ್ಮಿ ಮಹಿಳೆಯರಿಗೆ ಒಟ್ಟಿಗೆ 4000 ಹಣವನ್ನು ಬಿಡುಗಡೆ ಮಾಡುತ್ತಿದ್ದಾರೆ ಅಂದ್ರೆ 12 ಮತ್ತು 13ನೇ ಕಂತಿನ ಹಣವನ್ನು ಬಿಡುಗಡೆ ಮಾಡುವುದರ ಬಗ್ಗೆ ಒಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ ಇದರ ಸಂಪೂರ್ಣ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ ಆದ್ದರಿಂದ ಸಂಪೂರ್ಣವಾಗಿ ಓದಿ.
ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದ ನಂತರ ಮಹಿಳೆಯರಿಗೆ ಸಾಕಷ್ಟು ಆರ್ಥಿಕತೆ ಹೋಗಲಾಡಿಸಲು ತುಂಬಾ ಸಹಾಯಕವಾಗಿದೆ ಮತ್ತು ಅವರ ಸ್ವಂತ ವ್ಯವಹಾರ ನಡೆಸಲು ಈ ಒಂದು ಗೃಹಲಕ್ಷ್ಮಿ 2,000 ಹಣ ಬಹಳಷ್ಟು ಉಪಯೋಗವಾಗಿದೆ. ಗೃಹಲಕ್ಷ್ಮಿ ಮಹಿಳೆಯರು ಇಲ್ಲಿಯ ತನಕ 11ನೇ ಕಂತಿನ ಹಣ ಅಂದರೆ 22 ಸಾವಿರ ಹಣ ತಮ್ಮದಾಗಿಸಿಕೊಂಡಿದ್ದಾರೆ ಮತ್ತು 12 ಮತ್ತು 13ನೇ ಕಂತಿನ ಹಣಕ್ಕಾಗಿ ಸಾಕಷ್ಟು ಮಹಿಳೆಯರು ಕಾಯ್ದು ಕುಳಿತಿದ್ದಾರೆ ಇಂತಹ ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿಹಿ ಸುದ್ದಿಯನ್ನು ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆ ₹4,000 ಹಣ ಬಿಡುಗಡೆ:
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಆದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದಾಗ, ಕೆಲವಷ್ಟು ತಾಂತ್ರಿಕ ದೋಷಗಳಿಂದಾಗಿ ಗೃಹಲಕ್ಷ್ಮಿ ಯೋಜನೆ 12 ಮತ್ತು 13ನೇ ಕಂತಿನ ಅಂದರೆ 4000 ಹಣ ಜಮಾ ಆಗಲು ಸ್ವಲ್ಪ ತೊಂದರೆ ಆಗಿದೆ, ಹಾಗೂ ಸ್ವಲ್ಪ ಸಮಯವನ್ನು ತೆಗೆದುಕೊಂಡಿದೆ. ಇನ್ನು ಮುಂದೆ ಈ ರೀತಿ ಆಗಲ್ಲ ಇನ್ನೂ 4 ರಿಂದ 5 ದಿನಗಳ ಒಳಗೆ ಗೃಹಲಕ್ಷ್ಮಿ ಯೋಜನೆಯ 12 ಮತ್ತು 13ನೇ ಕಂತಿನ ಅಂದ್ರೆ 4000 ಹಣವನ್ನು ಒಟ್ಟಿಗೆ ಜಮಾ ಮಾಡಲಾಗುತ್ತದೆ. ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಹಣ ಚೆಕ್ ಮಾಡುವ ವಿಧಾನ:
ಮೊದಲನೇ ಹಂತದಲ್ಲಿ ನಿಮ್ಮ ಮೊಬೈಲ್ ನಲ್ಲಿ ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ಡೌನ್ಲೋಡ್ ಮಾಡಿ, ನಂತರದಲ್ಲಿ ಅಪ್ಲಿಕೇಶನ್ ಗೆ ಸಂಪೂರ್ಣ ವಿವರಣೆ ನೀಡಿ ತೆರೆಯಿರಿ. ಮತ್ತು ಮುಂದಿನ ಹಂತದಲ್ಲಿ ನೀವು ನಿಮ್ಮ ಖಾತೆಗೆ ಎಷ್ಟು ಹಣ ಬಂದು ಜಮಾ ಆಗಿದೆ ಮತ್ತು ಯಾವ ಯೋಜನೆ ಹಣ ಬಂದು ಜಮಾ ಆಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಒಂದು ಅಪ್ಲಿಕೇಶನ್ ನಲ್ಲಿ ಪಡೆಯಬಹುದಾಗಿದೆ.