Adarana Vishwakarma Scheme: 1 ರೂಪಾಯಿ ಬಡ್ಡಿಯನ್ನು ಕೊಡದೆ 3 ಲಕ್ಷದವರೆಗೆ ಸಾಲ ಪಡೆಯಿರಿ.! ಕೂಡಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ!
Adarana Vishwakarma Scheme: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಸಾಮಾನ್ಯ ಜನರಿಗೆ ಅಥವಾ ವ್ಯಾಪಾರಿಗಳಿಗೆ ಬಂಪರ್ ಗುಡ್ ನ್ಯೂಸ್ ಅಂತಾನೆ ಹೇಳಬಹುದು. ಒಟ್ಟಾರೆಯಾಗಿ 3 ಲಕ್ಷದವರೆಗೆ ಸಾಲ ಪಡೆಯಬಹುದು ಯಾವುದೇ 1 ರೂಪಾಯಿ ಬಡ್ಡಿಯನ್ನು ಮರಳಿ ಪಾವತಿಸಿದೆ. ಸಾಮಾನ್ಯ ಜನರಿಗೆ ಈ ಒಂದು ಯೋಜನೆ ಸಹಾಯಕವಾಗಲಿ ಎಂದು ಸರಕಾರವು ಯೋಜನೆಯನ್ನು ರೂಪಿಸಿದೆ.
ಸರ್ಕಾರವು ಸಾಮಾನ್ಯ ಜನರಿಗೆ ಸಿಹಿ ಸುದ್ದಿ ನೀಡಿದೆ, ಇದರಿಂದ ಎಷ್ಟೋ ಜನರಿಗೆ ಸಹಾಯಕ ಆಗಬಹುದು ಎಂದು ನಿರೀಕ್ಷಿಸಬಹುದು ಅದಲ್ಲದೆ ಕುಶಲಕರ್ಮಿ ಮತ್ತು ವ್ಯಾಪಾರಿಗಳಿಗೆ ದೊಡ್ಡ ಲಾಭ ಆಗಬಹುದು, ಕರ್ನಾಟಕದ ಜನತೆಗೆ ರಾಜ್ಯ ಸರ್ಕಾರವು ಗುಡ್ ನ್ಯೂಸ್ ಅನ್ನು ನೀಡಿದೆ. ಸಿಎಂ ಸಿದ್ದರಾಮಯ್ಯನವರ ಸರಕಾರವು ಕುಶಲಕರ್ಮಿಗಳಿಗೆ ಮತ್ತು ಚಿಕ್ಕ ವ್ಯಾಪಾರಿಗಳಿಗೆ ಉಪಯುಕ್ತ ವಾಗುವ ಒಂದು ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ಇದೊಂದು ಸಕಾರಾತ್ಮಕ ಅಂಶ ಎಂದು ಹೇಳಬಹುದು.
ಆದ್ರೆ ಈಗಾಗಲೇ ಕೇಂದ್ರ ಸರ್ಕಾರದ ಮೋದಿ ಸರ್ಕಾರವು ಈಗಾಗಲೇ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಒಂದು ಯೋಜನೆ ಮೂಲಕ ಆಧಾರಣ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೆ ತರಲು ಕರ್ನಾಟಕ ಸರಕಾರ ಯೋಚಿಸುತ್ತಿದೆ.
ಮೋದಿ ಸರಕಾರ ನೀಡುವ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಬಂದರೆ, ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ರೂ. 3 ಲಕ್ಷದವರೆಗೆ ಸಾಲ ಲಭ್ಯವಿದೆ. ಈ ಸಾಲಗಳಿಗೆ ಶೇಕಡಾ 13 ಬಡ್ಡಿ ವಿಧಿಸಲಾಗುತ್ತದೆ.
ಆದರೆ ಇದರಲ್ಲಿ ಶೇಕಡಾ 8 ರಷ್ಟು ಬಡ್ಡಿ ಸಬ್ಸಿಡಿ ಅಡಿಯಲ್ಲಿ ಮನ್ನಾ ಮಾಡಲಾಗುತ್ತದೆ. ಈ ಹೊರೆಯನ್ನು ಕೇಂದ್ರ ಸರ್ಕಾರವೇ ಭರಿಸುತ್ತದೆ. ಮತ್ತು ಉಳಿದ 5 ಪ್ರತಿಶತ ಬಡ್ಡಿ ಹೊರೆಯನ್ನು ಫಲಾನುಭವಿಗಳು ಪಾವತಿಸಬೇಕು. ಇದು ತುಂಬಾ ಕಡಿಮೆ ಬಡ್ಡಿ ಎಂದು ಹೇಳಬಹುದು.
ಆದರೆ, ಆದಾರನ ವಿಶ್ವಕರ್ಮ ಯೋಜನೆಯಡಿ ಕರ್ನಾಟಕದಲ್ಲಿ ಕೇಂದ್ರವು ನೀಡುವ ಈ ಯೋಜನೆಯನ್ನು ಜಾರಿಗೆ ತರಲು ಅವಕಾಶವಿದೆ. ಅಂದರೆ ಕೇಂದ್ರದ ಯೋಜನೆ ನೇರವಾಗಿ ಕರ್ನಾಟಕದಲ್ಲಿ ಜಾರಿಯಾಗಲಿದೆ. ನಂತರದಲ್ಲಿ, ರಾಜ್ಯ ಸರ್ಕಾರವು ಫಲಾನುಭವಿಗಳಿಗೆ ಹೆಚ್ಚಿನ ಮೊತ್ತವನ್ನು ನೀಡಲು ಅನುಮತಿಸುತ್ತದೆ. ಫಲಾನುಭವಿಗಳು ಪಾವತಿಸುವ ಶೇ.5ರ ಬಡ್ಡಿ ಹೊರೆಯನ್ನು ರಾಜ್ಯ ಸರಕಾರವೂ ಭರಿಸುವಂತೆ ಪ್ರಸ್ತಾವನೆಗಳು ನಿರೀಕ್ಷೆಯಲ್ಲಿದೆ.
ಅಲ್ಲದೆ, ರಾಜ್ಯ ಸರಕಾರವು 3 ಲಕ್ಷ ರೂ. ಸಾಲದಲ್ಲಿ ಒಂದಷ್ಟು ಮೊತ್ತ ನೀಡಲು ಕಲ್ಯಾಣ ಇಲಾಖೆ ಯೋಜನೆಗಳನ್ನು ಸಿದ್ದಪಡಿಸುತ್ತದೆ. ಅಂದರೆ ಯಾವುದೇ ಬಡ್ಡಿ ಪಾವತಿಸದೆ 3 ಲಕ್ಷ ಸಾಲ ಯೋಜನೆ ಪಡೆಯಬಹುದು.
ಅಲ್ಲದೆ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಯೋಜನೆಯಡಿ ಉಪಕರಣ ಖರೀದಿಗೆ ಜನರಿಗೆ ರೂ.15 ಸಾವಿರ ನೀಡಲಾಗುವುದು. ತರಬೇತಿಗೆ ರೂ.4 ಸಾವಿರ ಪಡೆಯಬಹುದು.