Student Scholarship 2024: ವಿಧ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್.! ₹2,00000 ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ, ಕೂಡಲೇ ಅರ್ಜಿ ಸಲ್ಲಿಸಿ!
Reliance Foundation Scholarship 2024-25: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ವಿದ್ಯಾರ್ಥಿಗಳು ತಮ್ಮ ಕುಟುಂಬದಲ್ಲಿ ಆರ್ಥಿಕತೆಯಿಂದ ಶಿಕ್ಷಣ ಪಡೆಯಲು ತುಂಬಾ ಕಷ್ಟವಾಗುತ್ತದೆ, ಮತ್ತು ಕುಟುಂಬದ ಹಾರ್ದಿಕತೆಯಿಂದಾಗಿ ಶಿಕ್ಷಣ ಬಿಟ್ಟು ಕೆಲಸದ ಕಡೆ ಹೋಗುತ್ತಾರೆ. ಆದ್ದರಿಂದ ಇಂಥ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದಕ್ಕಾಗಿ, ರಾಷ್ಟ್ರದ ಪ್ರಗತಿಯನ್ನು ಉತ್ತಮಗೊಳಿಸಲು ಮಾರ್ಗವೆಂದರೆ ಯುವಜನತೆಯಲ್ಲಿ ಹೂಡಿಕೆ ಮಾಡುವುದು, ಎಂಬ ರಿಲಯನ್ಸ್ ಸ್ಥಾಪಕರಾದ ಧೀರುಬಾಯಿ ಅಂಬಾನಿ ನಂಬಿಕೆಯಿಂದ ಪ್ರೇರೇತರಾಗಿ 25 ವರ್ಷ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವೇತನ ನೀಡುತ್ತದೆ. ವರ್ಷಗಳಲ್ಲಿ ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿ ವೇತನ ಕಾರ್ಯಕ್ರಮದಲ್ಲಿ ಭಾರತದಲ್ಲಿನ 23,000 ಯುವಕರ ಮೇಲೆ ಪರಿಣಾಮ ಬೀರುತ್ತದೆ, ಮತ್ತು ಅಷ್ಟು ಸಹಾಯ ಮಾಡುತ್ತದೆ.
2022 ಮತ್ತು 2023 ರಿಂದ reliance ಫೌಂಡೇಶನ್ ವಾರ್ಷಿಕವಾಗಿ 5,100 ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತದೆ. ಇದರಲ್ಲಿ ಸಮಾಜದಲ್ಲಿ ಹಿಂದುಳಿದ ವರ್ಗದ ಪ್ರತಿಭಾನ್ವಿತ 5,000 ವಿದ್ಯಾರ್ಥಿಗಳು ರಿಲಯನ್ಸ್ ಫೌಂಡೇಶನ್ ಪದವಿ ಪೂರ್ವ ವಿದ್ಯಾರ್ಥಿ ವೇತನದ ಮೂಲಕ ತಮ್ಮ ಆಯ್ಕೆಯಾದ ಯಾವುದೇ ಸ್ಟ್ರೀಮ್ ಅಧ್ಯಯನ ಮಾಡುತ್ತಾರೆ. 100 ಭವಿಷ್ಯದ ಸ್ನಾತಕೋತ್ತರ ಅಧ್ಯಯನ ಮಾಡುವ ಭಾರತೀಯ ಅತ್ಯುತ್ತಮ ವಿದ್ಯಾರ್ಥಿಗಳು ರಿಲಯನ್ಸ್ ಫೌಂಡೇಶನ್ ಸ್ನಾತಕೋತ್ತರ ವಿದ್ಯಾರ್ಥಿ ವೇತನದ ಮೂಲಕ ಇಂಜಿನಿಯರಿಂಗ್, ತಂತ್ರಜ್ಞಾನ ಶಕ್ತಿ, ಜೀವನ ವಿಜ್ಞಾನದಿಂದ ಸಿದ್ದ ಶಿಕ್ಷಣವು ಮಾಡುವ 100 ಅತ್ಯುತ್ತಮ ವಿದ್ಯಾರ್ಥಿಗಳು ಸಹಾಯಧನ ಪಡೆಯುತ್ತಾರೆ.
ಈ ವಿದ್ಯಾರ್ಥಿ ವೇತನ ಪಡೆಯಲು ಅರ್ಹತೆಗಳು:
ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.
- ಖಾಯಂ ಭಾರತೀಯ ನಿವಾಸಿ ಆಗಿರಬೇಕು.
- ಕನಿಷ್ಠ ಶೇಕಡಾ 60ರಷ್ಟು ಅಂಕ ಪಡೆದು 12ನೇ ತರಗತಿಯಲ್ಲಿ ಪಾಸಾಗಿರಬೇಕು ಮತ್ತು ಮುಂದಿನ ಪದವಿ ಪೂರ್ವ ಶಿಕ್ಷಣಕ್ಕೆ ಹಾಜರಾಗಿರಬೇಕು.
- ಕುಟುಂಬದ ಆದಾಯವು ವಾರ್ಷಿಕವಾಗಿ 15 ಲಕ್ಷದ ಒಳಗಡೆ ಇರಬೇಕು. ( 2.5 ಲಕ್ಷದ ಕಡಿಮೆ ಆದಾಯಕ್ಕೆ ಆದ್ಯತೆಯನ್ನು ನೀಡಲಾಗಿದೆ)
- ಕಡ್ಡಾಯವಾಗಿ ಅಪ್ಟಿಟ್ಯೂಡ ಪರೀಕ್ಷೆಗೆ ಹಾಜರಾಗಿರಬೇಕು.
ಈ ಕೆಳಗಿನ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಲ್ಲ:
- ಎರಡನೇ ವರ್ಷ ಅಥವಾ ಹೆಚ್ಚಿನ ವಿದ್ಯಾರ್ಥಿಗಳು ( ಶೈಕ್ಷಣಿಕ ವರ್ಷ 2023 ಅಥವಾ 24 ಅಥವಾ ಅದಕ್ಕಿಂತ ಮೊದಲು ತಮ್ಮ ಶಿಕ್ಷಣ ಪ್ರಾರಂಭಿಸಿದ್ದಾರೆ ಅಂತವರು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಇರುವುದಿಲ್ಲ)
- 10ನೇ ತರಗತಿ ನಂತರ ಡಿಪ್ಲೋಮೋ ಪಾಸ್ ಆಗಿದವರು.
- 2 ವರ್ಷದ ಪದವಿಪೂರ್ವ ಪದವಿಯನ್ನು ಅನುಸರಿಸುತ್ತಿರುವ ವಿದ್ಯಾರ್ಥಿಗಳು.
ಕಡ್ಡಾಯವಾಗಿ ಸಾಮರ್ಥ್ಯ ಪರೀಕ್ಷೆ ಪೂರ್ಣಗೊಳಿಸಿದ ಅಥವಾ ಪರೀಕ್ಷಿಸಮದಲ್ಲಿ ನಕಲು ಮಾಡಿದ ವಿದ್ಯಾರ್ಥಿಗಳು ಅರ್ಹತೆಯನ್ನು ಹೊಂದಿರುವುದಿಲ್ಲ.
ಈ ವಿದ್ಯಾರ್ಥಿ ವೇತನದ ಪ್ರಯೋಜನಗಳು:
ಪದವಿ ಕಾರ್ಯಕ್ರಮದ ಅವಧಿ ಒಳಗಡೆ ಎರಡು ಲಕ್ಷದವರೆಗೆ ವಿದ್ಯಾರ್ಥಿ ವೇತನವಾಗಿ ನೀಡುತ್ತದೆ.
ಬಡತನದಲ್ಲಿ ಶಿಕ್ಷಣ ಕಲಿಯುವ ವಿದ್ಯಾರ್ಥಿಗಳಿಗೆ ಸಹಾಯಕವಾಗಿದೆ, ತಮ್ಮ ಕುಟುಂಬದ ಆರ್ಥಿಕತೆಯನ್ನು ಮೀರಿ ಶಿಕ್ಷಣ ಕಲಿಯಬಹುದಾಗಿದೆ.
ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿ ವೇತನವು ವಿದ್ಯಾರ್ಥಿ ಶಿಕ್ಷಣಕ್ಕೆ ಅನುಕೂಲವಾಗುವಷ್ಟು ಹಣದ ಬೆಂಬಲವನ್ನು ನೀಡುತ್ತದೆ.
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ದಾಖಲೆಗಳು:
ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಈ ಕೆಳಗಿನ ದಾಖಲೆಗಳನ್ನು ತೆಗೆದುಕೊಳ್ಳಬೇಕು.
- ವಿದ್ಯಾರ್ಥಿಯ ಫೋಟೋ
- ವಿಳಾಸ ಪುರಾವೆ
- 10 ಮತ್ತು 12ನೇ ತರಗತಿಯ ಅಂಕಪಟ್ಟಿ
- ಪ್ರಸ್ತುತ ಕಾಲೇಜು ದಾಖಲಾತಿಯ ಪ್ರಮಾಣ ಪತ್ರ
ಗ್ರಾಮ ಪಂಚಾಯತ್ ಅಥವಾ ತಹಶೀಲ್ದಾರರು ಮತ್ತು ಇನ್ನಿತರು ನೀಡಿದ ಆದಾಯ ಪುರಾವೆ ಮತ್ತು ಕುಟುಂಬದ ಆದಾಯ ಪುರಾವೆ. - ಅಂಗವಿಕಲ ಪ್ರಮಾಣ ಪತ್ರ (ಇದ್ದಲ್ಲಿ ಮಾತ್ರ)
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನ:
ವಿದ್ಯಾರ್ಥಿಗಳು ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಮಾಹಿತಿ ಪ್ರಕಾರ ಅರ್ಜಿ ಸಲ್ಲಿಸಿ.
- ಮೊದಲನೇದಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.buddy4study.com/page/reliance-foundation-scholarships
- ನಂತರ ಅರ್ಜಿ ಪುಟಕ್ಕೆ ಹೋಗಲು ನಿಮ್ಮ ನೋಂದತ ಐಡಿಯನ್ನು ಬಳಸಿಕೊಂಡು ಲಾಗಿನ್ ಆಗಿ.
- ನೀವು ಇನ್ನೂ ನೋಂದಣಿ ಆಗಿಲ್ಲ ಅಂದರೆ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಬಳಸಿಕೊಂಡು ನೋಂದಣಿ ಆಗಿ.
- ನೀವು ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿ ವೇತನ ಪುಟಕ್ಕೆ ತೆರಳಿದಾಗ ಅರ್ಜಿ ನಮೂನೆಯನ್ನು ಸಲ್ಲಿಸಬೇಕು ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಿ.
- ಆನ್ಲೈನ್ ಅರ್ಹತಾ ಫಾರ್ಮ್ ಭರ್ತಿ ಮಾಡಿ.
- ನಂತರ ನಿಮ್ಮ ಇಮೇಲ್ ಗೆ ಲಾಗಿನ್ ಮಾಹಿತಿ ಆಹ್ವಾನ ಬರುತ್ತದೆ, ಇ-ಮೇಲ್ ಸ್ವೀಕರಿಸಿದ ಬಳಿಕ ಬಳಕೆದಾರರ ಹೆಸರು ಮತ್ತು ಪಾಸ್ವರ್ಡ್ ನೊಂದಿಗೆ ಲಾಗಿನ್ ಮಾಡಿ.
- ನಂತರ ವಿದ್ಯಾರ್ಥಿ ವೇತನ ಫಾರ್ಮ್ ಭರ್ತಿ ಮಾಡಿ, ಮತ್ತು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ.
ಈ ಯೋಜನೆಯ ಪ್ರಮುಖ ಮಾಹಿತಿ:
ಎಲ್ಲ ಅರ್ಜಿದಾರರು ತಮ್ಮ ಅರ್ಜಿಯ ಭಾಗಕ್ಕಾಗಿ ಅಪ್ಪಿಟ್ಯೂಡ್ ಪರೀಕ್ಷೆಯನ್ನು ಪೂರ್ಣಗೊಳಿಸಬೇಕು.
ಅರ್ಜಿಯನ್ನು ಸಲ್ಲಿಸಿದ ನಂತರ, ಅರ್ಜಿದಾರರು ಆನ್ಲೈನ್ ಪರೀಕ್ಷೆ ದಿನಾಂಕ ಸಮಯ ಮತ್ತು ಸಿಸ್ಟಮ್ ಹೊಂದಾಣಿಕೆ ಪರಿಶೀಲನೆ ನಿರ್ವಹಿಸುವ ಸೂಚನೆಗಳನ್ನು ಒಳಗೊಂಡಿರುತ್ತದೆ, ದೃಢೀಕರಣ ಇ-ಮೇಲ್ ಅನುಸರಿಸುತ್ತಾರೆ.
ಅಂತಿಮ ಪರೀಕ್ಷೆಗೆ ಒಂದು ವಾರ ಮೊದಲು ಅಭ್ಯಾಸ ಪರೀಕ್ಷೆಗೆ ಒಂದು ದಿನದ ಮೊದಲು ಅರ್ಜಿದಾರರನ್ನು ಆಹ್ವಾನಿಸುತ್ತಾರೆ.
ನೀವು ಅಪ್ಪಿಟ್ಯೂಡ್ ಪರೀಕ್ಷೆಯನ್ನು ಪೂರ್ಣಗೊಳಿಸಿದಾಗ ನಿಮ್ಮ ಅಪ್ಲಿಕೇಶನ್ ಪೂರ್ಣಗೊಳ್ಳುತ್ತದೆ ಎಂದು ಪರಿಗಣಿಸಲಾಗುತ್ತದೆ. ಪರೀಕ್ಷೆ ಮುಗಿದ ನಂತರ ಅಂಕಗಳನ್ನು ರಿಲಯನ್ಸ್ ಫೌಂಡೇಶನ್ ಗೆ ನೇರವಾಗಿ ಕಳಿಸಲಾಗುತ್ತದೆ.
ಈ ಒಂದು ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿ ವೇತನಕ್ಕೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.