Free Sewing Machine: ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಪ್ರಾರಂಭ.! ಹೀಗೆ ಅರ್ಜಿ ಸಲ್ಲಿಸಿ ಪಡೆದುಕೊಳ್ಳಿ!

Free Sewing Machine: ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಪ್ರಾರಂಭ.! ಹೀಗೆ ಅರ್ಜಿ ಸಲ್ಲಿಸಿ ಪಡೆದುಕೊಳ್ಳಿ!

Free Sewing Machine Scheme: ನಮಸ್ಕಾರ ಎಲ್ಲ ಕನ್ನಡದ ಜನತೆಗೆ, ಕೇಂದ್ರ ಸರ್ಕಾರವು ಮಹಿಳೆಯರ ಆರ್ಥಿಕತೆ ಮತ್ತು ಮಹಿಳೆಯರ ಉದ್ಯಮಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಮತ್ತು ಸಹಾಯ ಸಹ ಮಾಡ್ತಾಯಿದೆ. ಇದರ ಹಿನ್ನೆಲೆಯನ್ನಾಗಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಯೋಜನೆಯನ್ನು ಪರಿಚಯಿಸಲಾಗಿದೆ, ಒಂದು ಯೋಜನೆ ಪ್ರಮುಖ ಉದ್ದೇಶವೇನಂದರೆ, ಮಹಿಳೆಯರು ಸ್ವಂತ ವ್ಯಾಪಾರ ಮಾಡಿ ಅವರ ಆರ್ಥಿಕತೆಯನ್ನು ಹೋಗಲಾಡಿಸಲು ಮತ್ತು ಅವರಿಗೆ ಸಹಾಯ ಮಾಡಲು ಈ ಒಂದು ಯೋಜನೆ ಸಹಾಯಕರವಾಗಿದೆ. ಈಗ ಉಚಿತ ಹೊಲಿಗೆ ಯಂತ್ರದ ಜೊತೆಗೆ ಕೇಂದ್ರ ಸರ್ಕಾರವು ಮಹಿಳೆಯರಿಗೆ 1 ಲಕ್ಷ ಸಾಲವನ್ನು ಕೊಡಲು ಸಹ ಸಿದ್ಧವಾಗಿದೆ.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ!

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯು ಒಂದು ನಂಬಿಕೆಯ ಯೋಜನೆ ಆಗಿದ್ದು ಈ ಒಂದು ಯೋಜನೆ ಅಡಿಯಲ್ಲಿ ವಿವಿಧ ವೃತ್ತಿಗಳಿಗೆ ಸಂಬಂಧಿಸಿದ ಉಪಕರಣಗಳು ಹಾಗೂ ಯಂತ್ರಗಳನ್ನು ಮತ್ತು ಇನ್ನಿತರಗಳನ್ನು ನೀಡುತ್ತದೆ. ಈ ಒಂದು ಯೋಜನೆಯಲ್ಲಿ ಮಹಿಳೆಯರು ಹಾಗೂ ಪುರುಷರು ಹೊಲಿಗೆ ಯಂತ್ರವನ್ನು ಪಡೆಯಬಹುದು.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಮುಖ್ಯ ಅಂಶಗಳು!

  • ಆರ್ಥಿಕತೆಯ ನೆರವು: ಪಿಎಂ ವಿಶ್ವಕರ್ಮ ಯೋಜನೆ ಹೊಲಿಗೆ ಯಂತ್ರ ಪಡೆದುಕೊಳ್ಳಲು 15,000 ವರೆಗೆ ಆರ್ಥಿಕ ನೆರವನ್ನು ನೀಡುತ್ತದೆ.
  • ಡಿಜಿಟಲ್ ತರಬೇತಿ: ಮಹಿಳೆಯರು ತರಬೇತಿಯಲ್ಲಿ ಭಾಗವಹಿಸಿ ದಿನಕ್ಕೆ 500 ರೂಪಾಯಿ ಸಂಪಾದಿಸಬಹುದು.
  • ಸಾಲದ ವ್ಯವಸ್ಥೆ: ಯೋಜನೆಯಲ್ಲಿ ಒಂದು ಲಕ್ಷದವರೆಗೆ ಸಾಲವನ್ನು ನೀಡಲಾಗುತ್ತದೆ ಮತ್ತು 18 ತಿಂಗಳ ಒಳಗಾಗಿ ಮರುಪಾವತಿ ಮಾಡಬೇಕಾಗುತ್ತದೆ, ಮರಳಿ ಹಣವನ್ನು ಪಾವತಿ ಮಾಡಿದಾಗ ನಿಮಗೆ ಎರಡು ಲಕ್ಷದವರೆಗೆ ಸಾಲ ಮತ್ತು ಸಿಗುತ್ತದೆ ಇದನ್ನು 30 ತಿಂಗಳ ಒಳಗಾಗಿ ಹಿಂತಿರುಗಿಸಬೇಕು.
  • ಕಡಿಮೆ ಬಡ್ಡಿದರ: ಸಾಲ ತುಂಬಾ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ, ಸರ್ಕಾರವು ಕ್ರೆಡಿಟ್ ಗ್ಯಾರಂಟಿ ದರವನ್ನು ಪಾವತಿಸುತ್ತದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆ?

  • 18 ವರ್ಷಕ್ಕಿಂತ ವಯಸ್ಸು ಮೇಲ್ಪಟ್ಟಿರಬೇಕು.
  • ಭಾರತದ ಪ್ರಜೆ ಆಗಿರಬೇಕು.
  • ಈಗಾಗಲೇ ಹೊಲಿಗೆ ವೃತ್ತಿ ಎಲ್ಲಿ ಸೇರಿಕೊಂಡಿರಬೇಕು.
  • ಟೈಲರ್ ಆಗಿ ಕೆಲಸ ನಿರ್ವಹಿಸುವ ಯಾವುದೇ ವ್ಯಕ್ತಿಯು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಪಿಎಂ ವಿಶ್ವಕರ್ಮ ಯೋಜನೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?

  • ಆಧಾರ್ ಕಾರ್ಡ್
  • ವಿಳಾಸ ಪುರಾವೆ
  • ಗುರುತಿನ ಚೀಟಿ
  • ಅರ್ಜಿದಾರರ ಫೋಟೋ
  • ಬ್ಯಾಂಕ್ ಪಾಸ್ ಬುಕ್
  • ಮೊಬೈಲ್ ಸಂಖ್ಯೆ
  • ಜಾತಿ ಪ್ರಮಾಣ ಪತ್ರ

ಈ ಯೋಜನೆಗೆ ಅರ್ಜಿ ಸಲ್ಲಿಸುವ ಹೇಗೆ?

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವ ಲಿಂಕ್: https://pmvishwakarma.gov.in/

ನೀವು ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ತೊಂದರೆ ಆಗಲಿ ನಿಮ್ಮ ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಈ ಒಂದು ಯೋಜನೆಯಿಂದಾಗಿ ಮಹಿಳೆಯರ ಆರ್ಥಿಕತೆ ಮತ್ತು ತಮ್ಮ ಕುಟುಂಬವನ್ನು ಸುಧಾರಿಸಿಕೊಂಡು ಹೋಗಲು ತುಂಬಾನೇ ಸಹಾಯಕರವಾಗುತ್ತಿದೆ, ಆದ್ದರಿಂದ ಬೇಗನೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಮೇಲ್ಗಡೆ ನೀಡಿರುವ ಮಾಹಿತಿ ಪ್ರಕಾರ. ಇದೇ ತರನಾದ ಸಹಾಯಕವಾದ ಮಾಹಿತಿಗಾಗಿ ನಮ್ಮ ಜಾಲತಾಣವನ್ನು ಅನುಸರಿಸಿ.

Leave a Comment